ETV Bharat / state

ಭಾಲ್ಕಿಯಲ್ಲಿ ಪುಡಿ ರೌಡಿಗಳಿಗೆ ನಡುಕ ಹುಟ್ಟಿಸಿದ ಖಡಕ್​ ಡಿವೈಎಸ್​ಪಿ ದೇವರಾಜ್

ಭಾಲ್ಕಿ ಉಪ ವಿಭಾಗದ ನೂತನ ಡಿವೈಎಸ್​​ಪಿ ಬಿ. ದೇವರಾಜ್ ಅವರು ಔರಾದ್, ಕಮಲಾ ನಗರ ಹಾಗೂ ಭಾಲ್ಕಿ ಸರ್ಕಲ್ ವಿಭಾಗದಲ್ಲಿ ರೌಡಿಗಳ ಚಲನವಲನದ ಬಗ್ಗೆ ಅವಲೋಕನ ನಡೆಸಿದರು. ಈ ವೇಳೆ ರೌಡಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟರು.

rowdy-parede-in-bidar
ರೌಡಿ ಪರೇಡ್​​​​
author img

By

Published : Feb 3, 2020, 5:57 PM IST

Updated : Feb 3, 2020, 8:05 PM IST

ಬೀದರ್: ರೌಡಿಸಂ ಮಾಡಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಪುಡಿ ರೌಡಿಗಳಿಗೆ ರೌಡಿ ಪರೇಡ್​​​​ನಲ್ಲಿ ಡಿವೈಎಸ್​​ಪಿ ದೇವರಾಜ್ ಇಂದು ಮೈಚಳಿ ಬಿಡಿಸಿದರು.

ಭಾಲ್ಕಿ ಉಪ ವಿಭಾಗದ ನೂತನ ಡಿವೈಎಸ್​​ಪಿ ಬಿ.ದೇವರಾಜ್ ಅವರು ಔರಾದ್, ಕಮಲಾ ನಗರ ಹಾಗೂ ಭಾಲ್ಕಿ ಸರ್ಕಲ್ ವಿಭಾಗದಲ್ಲಿ ರೌಡಿಗಳ ಚಲನವಲನದ ಬಗ್ಗೆ ಅವಲೋಕನ ನಡೆಸಿದರು.

ಪುಡಿ ರೌಡಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಡಿವೈಎಸ್​ಪಿ ದೇವರಾಜ್​

ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡಿ. ಒಂದು ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ರು.

ಅಷ್ಟೇ ಅಲ್ಲದೆ, ಔರಾದ್ ಪಟ್ಟಣದಲ್ಲಿ ನಡುರಸ್ತೆಯಲ್ಲಿ ವಾಹನಗಳನ್ನು ಪಾರ್ಕ್​ ಮಾಡಿ, ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಖಾಸಗಿ ವಾಹನ ಮಾಲೀಕರಿಗೂ ಒಂದೆಡೆ ಸೇರಿಸಿ ಎಚ್ಚರಿಸಿದರು. ನೀವು ಸಾರಿಗೆ ನಿಯಮ ಮೀರಿದ್ರೆ ನಮಗೆ ಕ್ರಮ ಅನಿವಾರ್ಯ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದಲೂ ಸಂಚಾರಕ್ಕೆ ತೊಂದರೆ ಆಗ್ತಿದೆ. ಇದನ್ನು ಅರ್ಥ ಮಾಡಕೊಳ್ಳಿ ಎಂದು ಹೇಳಿದ್ರು.

Last Updated : Feb 3, 2020, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.