ETV Bharat / state

ಬೀದರ್​: ಅಗ್ನಿವೀರ್ ನೇಮಕಾತಿ ರ್‍ಯಾಲಿಗೆ ಭೇಟಿ ನೀಡಿದ ಸಚಿವ ಪ್ರಭು ಬಿ ಚವ್ಹಾಣ - etv bharat kannada

ಅಗ್ನಿಪಥ ಯೋಜನೆಯ ಅಡಿ ಅಗ್ನಿವೀರರ ನೇಮಕಾತಿಗಾಗಿ ಬೀದರ್​ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ರ್‍ಯಾಲಿಗೆ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ನೋಂದಣಿ‌ಯಾಗಿದ್ದಾರೆ.

prabhu-b-chavan-visited-agniveer-recruitment-rally-in-bidar
ಬೀದರ್​: ಅಗ್ನಿವೀರ್ ನೇಮಕಾತಿ ರ್ಯಾಲಿಗೆ ಭೇಟಿ ನೀಡಿದ ಸಚಿವ ಪ್ರಭು ಬಿ ಚವ್ಹಾಣ
author img

By

Published : Dec 16, 2022, 2:29 PM IST

Updated : Dec 16, 2022, 2:56 PM IST

ಬೀದರ್​: ಅಗ್ನಿವೀರ್ ನೇಮಕಾತಿ ರ್‍ಯಾಲಿಗೆ ಭೇಟಿ ನೀಡಿದ ಸಚಿವ ಪ್ರಭು ಬಿ ಚವ್ಹಾಣ

ಬೀದರ್​ : ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಗ್ನಿವೀರರ ನೇಮಕಾತಿ ರ್‍ಯಾಲಿಗೆ ಪಶು ಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ ಭೇಟಿ ನೀಡಿ, ಭಾವಿ ಅಗ್ನಿವೀರರಿಗೆ ಧೈರ್ಯ ತುಂಬಿದರು.

ಕ್ರೀಡಾಂಗಣದಲ್ಲಿ ಹಸಿರು ಧ್ವಜ ಹಾರಿಸುವ ಮೂಲಕ ಓಟದ ಪರೀಕ್ಷೆಗೆ ಚಾಲನೆ ನೀಡಿದ‌ ಅವರು, ಉದ್ದ ಜಿಗಿತ, ಎತ್ತರ ಜಿಗಿತ ಸೇರಿದಂತೆ ವಿವಿಧ ಪರೀಕ್ಷಾ ಸ್ಥಳಗಳಿಗೆ ಭೇಟಿ ನೀಡಿ ಅಭ್ಯರ್ಥಿಗಳಲ್ಲಿ ಹುರುಪು ಹೆಚ್ಚಿಸಿದರು. 'ಸೇನಾ ನೇಮಕಾತಿಗೆ ಏರ್ಪಡಿಸುವ ದೈಹಿಕ ಮತ್ತು ಲಿಖಿತ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ಉತ್ತೀರ್ಣರಾಗಿ ಭಾರತ ಮಾತೆಯ ಸೇವೆ ಮಾಡಬೇಕು ಎನ್ನುವ ತಮ್ಮ ಮಹಾದಾಸೆ ಈಡೇರಲಿ'' ಎಂದು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಯಾವುದೇ ಕಾರಣಕ್ಕೂ ತೀವ್ರ ನಿರಾಸೆಗೆ ಒಳಗಾಗದೇ ಮುಂದಿನ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು. ದೃಢ ಸಂಕಲ್ಪದೊಂದಿಗೆ ಸತತ ಪ್ರಯತ್ನಪಟ್ಟಲ್ಲಿ ಅಸಾಧ್ಯ ಎನಿಸುವುದು ಯಾವುದು ಇಲ್ಲ. ಹಾಗಾಗಿ ಎಲ್ಲ ಅಭ್ಯರ್ಥಿಗಳು ಧನಾತ್ಮಕ ಚಿಂತನೆಯೊಂದಿಗೆ ಗುರಿ ಸಾಧಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜಾರಿಗೆ‌ ತಂದಿರುವ ಅಗ್ನಿಪಥ ಎಂಬ ಮಹತ್ವದ ಯೋಜನೆಯ ಅಡಿ ಅಗ್ನಿವೀರರ ನೇಮಕಾತಿಗಾಗಿ ಬೀದರ್​ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ರ್‍ಯಾಲಿಗೆ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ನೋಂದಣಿ‌ಯಾಗಿದ್ದಾರೆ. ಪ್ರತಿದಿನ ಸಾವಿರಾರು ಅಭ್ಯರ್ಥಿಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವ ಸೇನಾ ಅಧಿಕಾರಿಗಳ ಕೆಲಸ ಮೆಚ್ಚುವಂಥದ್ದು.

ನಾಡಿನ ವಿವಿಧೆಡೆಯಿಂದ ಜಿಲ್ಲೆಗೆ ಆಗಮಿಸಿರುವ ಯುವಕರು‌ ಅತ್ಯಂತ ಉತ್ಸಾಹದಿಂದ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ ಮಾತೆಯ ಸೇವೆ ಸಲ್ಲಿಸುವುದಕ್ಕಾಗಿ ಅಗ್ನಿವೀರರಾಗಿ ನೇಮಕವಾಗಲು ಯುವಕರು ತೋರಿಸುತ್ತಿರುವ ಉತ್ಸಾಹ ಕಂಡು ಸಂತೋಷವಾಗುತ್ತಿದೆ ಎಂದು ಹೇಳಿದರು.

ಬೀದರ್​ನಲ್ಲಿ ನಡೆಯುತ್ತಿರುವ ರ್‍ಯಾಲಿಗೆ ನೋಂದಣಿಯಾಗಿರುವ ಅಭ್ಯರ್ಥಿಗಳ ಸಂಖ್ಯೆ, ಪ್ರತಿ ದಿನ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು, ವಿವಿಧ ಹಂತಗಳ ಪರೀಕ್ಷೆಗಳು ಹೀಗೆ ರ್ಯಾಲಿಯ ಕುರಿತು ಸೇನಾ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯಕುಮಾರ, ಹಿರಿಯ ಪಶುವೈದ್ಯಾಧಿಕಾರಿ ಡಾ.ಗೌತಮ ಅರಳಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ರಾವಸಾಬ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:1971ರ ಭಾರತ-ಪಾಕ್​ ಯುದ್ಧಕ್ಕೆ 51 ವರ್ಷ ಪೂರ್ಣ: ಹುತಾತ್ಮ ಯೋಧರಿಗೆ ಗೌರವ

Last Updated : Dec 16, 2022, 2:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.