ಬಸವಕಲ್ಯಾಣ (ಬೀದರ್): 2013ರ ಪ್ರಸ್ತಾಪಿತ ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡುವುದು ಬೇಡ ಮತ್ತು ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಕೂಡದು ಎಂದು ಒತ್ತಾಯಿಸಿ ಇಲ್ಲಿಯ ಕೆಪಿಟಿಸಿಎಲ್ ತಾಲೂಕು ನೌಕರರ ಸಂಘದ ಆಶ್ರಯದಲ್ಲಿ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಿದರು.
ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಬಾಲೂಸ್ಕರ್ ನೇತೃತ್ವದಲ್ಲಿ ಕಾರ್ಯದರ್ಶಿ ಗೌರಿಶಂಕರ ಕಳ್ಳಿಮಠ, ರಾಜಕುಮಾರ ರಟಕಲೆ, ಮಲ್ಲಿಕಾರ್ಜುನ ಸಕ್ಕರಭಾವಿ, ಬಸವರಾಜ ಯಾಚೆ, ಕಲ್ಯಾಣರಾವ ರಾಮಬಾಣ, ಚಂದ್ರಕಾಂತ ಚಿರಡೆ ಹಾಗೂ ನೌಕರರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.
ವಿದ್ಯುತ್ ಕ್ಷೇತ್ರ ಖಾಸಗೀಕರಣದಿಂದ ಹಲವು ಸಮಸ್ಯೆ ಎದುರಾಗಲಿವೆ. ಯಾವುದೇ ಕಾರಣಕ್ಕೂ ಈ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು ಎಂದು ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದರು. ಜೆಸ್ಕಾಂ ನೌಕರರು ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿ ವೇಳೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.