ಬೀದರ್: ನಗರದ ಓಲ್ಡ್ ಸಿಟಿ ಕಂಟೇನ್ಮೆಂಟ್ ಝೋನ್ ಮುಕ್ತವಾಗಲಿದೆ ಎಂದು ಶಾಸಕ ರಹೀಂಖಾನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಈ ಕುರಿತು ಶಾಸಕ ರಹೀಂಖಾನ್ ಮಾತನಾಡಿರುವ ವಿಡಿಯೋದಲ್ಲಿ ಓಲ್ಡ್ ಸಿಟಿಯ ಮೂರು ವಾರ್ಡ್ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾರ್ಡ್ಗಳ ಮೇಲೆ ಹೇರಲಾದ ಸೀಲ್ ಡೌನ್ ನಿಯಮ ತೆರವುಗೊಳಿಸಿ ಆದೇಶ ಮಾಡಲಾಗಿದೆ. ಇನ್ನೂ ಹಂತ ಹಂತವಾಗಿ ಓಲ್ಡ್ ಸಿಟಿಯ ಎಲ್ಲಾ ಭಾಗ ಕಂಟೇನ್ಮೆಂಟ್ ಝೋನ್ನಿಂದ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.
ಓಲ್ಡ್ ಸಿಟಿಯ ಒಟ್ಟು 12 ವಾರ್ಡ್ಗಳನ್ನು ಸೀಲ್ ಡೌನ್ ಮಾಡಿ, ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿ ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದೆ. ಅಲ್ಲದೆ ಸೋಂಕಿತರು ಪತ್ತೆಯಾದ ಭಾಗವನ್ನು ಸಾಮೂಹಿಕವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದರು. ಮಂಗಳವಾರ ಓಲ್ಡ್ ಸಿಟಿಯಲ್ಲೇ 7 ಹೊಸ ಪ್ರಕರಣಗಳು ಪತ್ತೆಯಾಗಿವೆ.