ETV Bharat / state

ಪ್ರಮುಖ ಸ್ಥಳಗಳಲ್ಲೂ ಶೌಚಾಲಯ ನಿರ್ಮಾಣ ಮಾಡಿಲ್ಲ: ಮಲ್ಲಿಕಾರ್ಜುನ ಖೂಬಾ ಗರಂ - ಮಲ್ಲಿಕಾರ್ಜುನ ಖೂಬಾ ಲೆಟೆಸ್ಟ್ ನ್ಯೂಸ್

ಐತಿಹಾಸಿ ಪ್ರವಾಸಿ ಕೇಂದ್ರ, ಶರಣರ ಕಾಯಕ ಭೂಮಿ ಬಸವಕಲ್ಯಾಣದ ಶಾಲೆ, ಮಠ, ಮಂದಿರ ಹಾಗೂ ದರ್ಗಾದಂತಹ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿಯೂ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಿಲ್ಲ. ಇದು ಸ್ಥಳೀಯ ಆಡಳಿತಕ್ಕೆ ನಾಚಿಗೆ ಆಗಬೇಕಾದ ಸಂಗತಿಯಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಅಸಮಾಧಾನ ವ್ಯಕ್ತಪಡಿಸಿದರು.

No public toilet has been built in major religious places : Mallikarjuna Khooba
ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿಯೂ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿಲ್ಲ: ಮಲ್ಲಿಕಾರ್ಜುನ ಖೂಬಾ
author img

By

Published : Feb 26, 2020, 9:14 PM IST

ಬಸವಕಲ್ಯಾಣ: ಐತಿಹಾಸಿಕ ಪ್ರವಾಸಿ ಕೇಂದ್ರ, ಶರಣರ ಕಾಯಕ ಭೂಮಿ ಬಸವಕಲ್ಯಾಣದ ಶಾಲೆ, ಮಠ, ಮಂದಿರ ಹಾಗೂ ದರ್ಗಾದಂತಹ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿಯೂ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಿಲ್ಲ. ಇದು ಸ್ಥಳೀಯ ಆಡಳಿತಕ್ಕೆ ನಾಚಿಗೆ ಆಗಬೇಕಾದ ಸಂಗತಿಯಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖೂಬಾ, ಗ್ರಾಮೀಣ ಭಾಗದ ಬಡ ಜನರ ಕಲ್ಯಾಣಕ್ಕಾಗಿ ಸರ್ಕಾರ ನಾನಾ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪಾದರ್ಶಕವಾಗಿ ನಡೆಯಬೇಕು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಸುಮ್ಮನಿರಲು ಆಗಲ್ಲ ಎಂದು ಹೇಳಿದರು. ಯಾರೇ ಅಧಿಕಾರದಲ್ಲಿ ಇರಲಿ, ಅಧಿಕಾರಿಗಳು ಯಾರೇ ಇರಲಿ, ಅಭಿವೃದ್ಧಿ ಕಾರ್ಯಗಳಿಗೆ ಸದಾ ಸಹಕರಿಸಲಾಗುವುದು. ಆದರೆ, ಅವ್ಯವಹಾರ ನಡೆದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಜನರಿಗೆ ಅನ್ಯಾಯವಾದರೆ ಅದನ್ನು ಸಹಿಸಲಾಗದು, ಅಗತ್ಯ ಬಿದ್ದರೆ ಜನರಿಗಾಗಿ ಹೋರಾಡಲು ಸಿದ್ಧ ಎಂದರು.

ಮಲ್ಲಿಕಾರ್ಜುನ ಖೂಬಾ

ನಗರಸಭೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಮನೆಗಳಿಗೆ ಕಾನೂನು ಬಾಹಿರ ಮನೆ ನಂಬರ್​ ಹಾಕಿದ್ದಾರೆ, ಒಬ್ಬರ ಮನೆ ಇನ್ನೊಬ್ಬರ ಹೆಸರಿಗೆ ಮಾಡಿದ್ದಾರೆ. ಈ ಕುರಿತು ಲೋಕಾಯುಕ್ತರಿಗೆ ಪತ್ರ ಬರೆಯಲಾಗುವುದು. ನಗರದಲ್ಲಿ ವಾರ್ಡ್​ಗಳಿಗೆ ಫಲಕಗಳಿಲ್ಲ, 20 ಅಂಗನವಾಡಿಗಳಿಗೆ ಅನುದಾನ ಮಂಜೂರಿಯಾದರೂ ನಗರಸಭೆ ಸ್ಥಳ ಗುರುತಿಸದೇ ಇರುವುದರಿಂದ ಅಂಗನವಾಡಿಗಳು ನಿರ್ಮಾಣವಾಗಿಲ್ಲ ಎಂದು ತಿಳಿಸಿದರು. ಕಳೆದ ಅವಧಿಯಲ್ಲಿ ತಾವು ಶಾಸಕರಾಗಿದ್ದಾಗ ಅಭಿವೃದ್ಧಿ ಕಾರ್ಯಗಳಿಗೆ ವಿವಿಧ ಇಲಾಖೆಗೆ ಸುಮಾರು 150 ಕೋಟಿ ರೂ. ಮಂಜೂರಿಯಾಗಿದ್ದವು. ಆದರೆ, ಇದರಲ್ಲಿ ಕೇವಲ ಸುಮಾರು 90 ಕೋಟಿ ರೂಪಾಯಿಯಷ್ಟು ಖರ್ಚಾಗಿದ್ದು, ಉಳಿದ ಅನುದಾನದ ಕೆಲಸಗಳು ನಡೆದಿಲ್ಲ. ಇದು ಸ್ಥಳೀಯ ಆಡಳಿತ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಜಿಲ್ಲಾ ಉಸ್ತುವರಿ ಸಚಿವರಿಂದ ನಡೆದ ಕೆಡಿಪಿ ಸಭೆಯಲ್ಲಿ ಸರ್ಕಾರಿ ಆಸ್ಪತ್ರೆ ಕುರಿತು ಚರ್ಚೆಯಾಗಿರುವುದನ್ನು ಪ್ರಸ್ತಾಪಿಸಿದ ಖೂಬಾ, ತಪ್ಪು ಮಾಡಿದವರ ವಿರುದ್ಧ ತಕ್ಷಣ ಕೇಸ್ ಹಾಕಬೇಕು ಎಂದು ಒತ್ತಾಯಿಸಿದರು. ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಕಲ್ಪಿಸುವಂತೆ ತಾವು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಈಗಾಗಲೇ 50 ಕೋಟಿ ಮಂಜೂರಿ ಮಾಡಿದ್ದಾರೆ. ಗೋ.ರು.ಚ, ವರದಿಯಂತೆ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ತಗುಲುವ 600 ಕೋಟಿ ರೂ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅವಧಿಯೊಳಗೆಯೇ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನುಭವ ಮಂಟಪಕ್ಕೆ ಅನುದಾನ ಘೋಷಣೆ, ಮಂಜೂರಿ, ಬಿಡುಗಡೆಗಿಂತಲೂ ಸ್ಥಳ ಅಂತಿಮಗೊಳಿಸಿ ಭೂಸ್ವಾಧೀನ ಪಡೆಸಿಕೊಳ್ಳುವುದು ಮುಖ್ಯವಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಮೊದಲು ಸ್ಥಳ ಅಂತಿಮಗೊಳಿಸಿ ಸ್ಥಳದಲ್ಲಿ ಶಿಲಾನ್ಯಾಸಕ್ಕೆ ಸಿದ್ಧತೆ ಮಾಡಿಕೊಂಡರೆ ಕೆಲಸಕ್ಕೆ ಚಾಲನೆ ಸಿಗಲಿದೆ ಎಂದರು. ವಿಕಲಚೇತನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಗುರುವಾರ ಎಸ್‌ಎಸ್ ಖೂಬಾ ಪ್ರತಿಷ್ಠಾನದಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ. ಇಲ್ಲ ಅವರಿಗೆ ಸಿಕ್ಕಿರುವ ಸರ್ಕಾರದ ಸೌಲಭ್ಯಗಳು, ಸಿಗಬೇಕಿರುವ ಸೌಲಭ್ಯ ಮತ್ತು ಸೌಲಭ್ಯ ಸಿಗುವಲ್ಲಿ ಅಗುತ್ತಿರುವ ವಿಳಂಬ ಕುರಿತು ಚರ್ಚಿಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ಈ ವೇಳೆ ಪ್ರಮುಖರಾದ ಕಾಳಿದಾಸ್​​ ಜಾಧವ, ಸಂಜು ಗಾಯಕವಾಡ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.