ಬಸವಕಲ್ಯಾಣ/ಬೀದರ್: ಕೊರೊನಾ ಹಿನ್ನೆಲೆಯಲ್ಲಿ ಜನತೆಯ ಹಿತ ದೃಷ್ಠಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಬೆಂಬಲಿಸಲು ಬೆಳಗಿನ ಜಾವವೇ ಮದುವೆ ಕಾರ್ಯ ನಡೆಸಿ, ಜನತಾ ಕರ್ಫ್ಯೂಗೆ ಬೆಂಬಲಿಸಿದ ಪ್ರಸಂಗ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ.
ಇಸ್ಲಾಂಪೂರ ಗ್ರಾಮದ ರತ್ನಮ್ಮ, ಹಣಮಂತಪ್ಪ ಮೇತ್ರೆ ಅವರ ಪುತ್ರ ಪ್ರಭು ಹಾಗೂ ಹುಮನಾಬಾದ ತಾಲೂಕಿನ ಘಾಟಬೋರೋಳ ಗ್ರಾಮದ ನಾಗಮ್ಮ, ವಿಶ್ವನಾಥ ಕೋಟೆ ಅವರ ಪುತ್ರಿ ರೇಷ್ಮಾ ಅವರೊಂದಿಗೆ ಮುಂಜಾನೆ 6:30ಕ್ಕೆ ವಿವಾಹ ಕಾರ್ಯ ಜರುಗಿದೆ.
ಪೂರ್ವ ನಿಗದಿಯಂತೆ ಇಂದು ಮಧ್ಯಾಹ್ನ 12:32ಕ್ಕೆ ಗ್ರಾಮದ ದತ್ತಾತ್ರೆಯ ದೇವಸ್ಥಾನದಲ್ಲಿ ಇವರ ಮದುವೆ ನಡೆಯಬೇಕಿತ್ತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ ಮಾ.31ರ ವರೆಗೆ 144 ಸೆಕ್ಷನ್ ಜಾರಿಯಲ್ಲಿದೆ. ಹೀಗಾಗಿ ಅದ್ಧೂರಿ ಮದುವೆ ಕೈಬಿಟ್ಟು ಸರಳವಾಗಿ ಅಚರಿಸುವ ಮೂಲಕ ವಧು-ವರರ ಪರಿವಾರದವರು ಬದ್ಧತೆ ಪ್ರದರ್ಶಸಿದ್ದಾರೆ.