ಬೀದರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್. ಟಿ. ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರ, ನೂತನ ಎಸ್.ಪಿಯಾಗಿ ನಾಗೇಶ್ ಡಿ. ಎಲ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ರೋಬಿನ್ ವನರಾಜ್. ಜೆ. ಅವರು, ಆದೇಶ ಹೊರಡಿಸಿ ಬೀದರ್ ಎಸ್.ಪಿ ಶ್ರೀಧರ್ ಅವರನ್ನು ಗುಪ್ತ ದಳದ ಎಸ್.ಪಿಯಾಗಿ ಬೆಂಗಳೂರಿಗೆ ವರ್ಗಾವಣೆಗೊಳಿಸಿದ್ದಾರೆ.
![ಬೀದರ್ ಜಿಲ್ಲೆಗೆ ನೂತನ 'ಎಸ್ಪಿ'ಯಾಗಿ ನಾಗೇಶ್ ಡಿ. ಎಲ್. ನೇಮಕ](https://etvbharatimages.akamaized.net/etvbharat/prod-images/5914177_thum.png)
ಅಲ್ಲದೆ ಖಾಲಿಯಾದ ಬೀದರ್ ಎಸ್.ಪಿ ಹುದ್ದೆಗೆ ಹುಬ್ಬಳಿ-ಧಾರವಾಡ ಡಿಸಿಪಿ (ಕಾನೂನು ಸುವ್ಯವಸ್ಥೆ)ಯಾಗಿ ಕಾರ್ಯ ನಿರ್ವಹಿಸಿದ, ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್. ಅವರನ್ನು ನೇಮಕ ಮಾಡಿರುವುದು ಆದೇಶದಲ್ಲಿ ಉಲ್ಲೇಖವಾಗಿದೆ.