ETV Bharat / state

ದಯವೇ ಧರ್ಮ ಎಂದ ಬಸವಣ್ಣ.. ಹಿಂದೂವಿನ ಅಂತ್ಯಕ್ರಿಯೆ ಮಾಡಿ ಮುಸ್ಲಿಮರು ನಿಜವಾಗಿಸಿದರು..

author img

By

Published : Apr 25, 2021, 9:50 PM IST

Updated : Apr 25, 2021, 10:00 PM IST

ಕೊರೊನಾ ಭೀತಿ ಹಿನ್ನೆಲೆ ಸಂಬಂಧಿಕರು ಸ್ಥಳೀಯರು ಬಾರದ ಹಿನ್ನೆಲೆ ಮುಸ್ಲಿಂ ಯುವಕರೇ ಮುಂದೆ ಬಂದು ಮೃತ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ..

funeral
funeral

ಬಸವಕಲ್ಯಾಣ : ಆಕಸ್ಮಿಕವಾಗಿ ಮೃತಪಟ್ಟ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ಮಾಡುವ ಮೂಲಕ ಮುಸ್ಲಿಂ ಯುವಕರು ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ನಗರದಲ್ಲಿ ನಡೆದಿದೆ.

ನಗರದ ಶಾ ನಗರ ನಿವಾಸಿಯಾಗಿದ್ದ ಯಾಧವರಾವ್​ ಎನ್ನುವ 55 ವರ್ಷದ ವ್ಯಕ್ತಿಯು ಭಾನುವಾರ ಮಲಗಿದ್ದಲ್ಲೆ ಆಕಸ್ಮಿಕವಾಗಿ ಪ್ರಾಣ ಬಿಟ್ಟಿದ್ದಾರೆ. ಆದರೆ, ಇವರ ಸಾವಿನ ಸುದ್ದಿ ತಿಳಿದರೂ ಕೂಡ ಕೊರೊನಾ ಭಯದಿಂದ ಅಂತ್ಯಸಂಸ್ಕಾರ ನೆರವೇರಿಸಲು ಸ್ಥಳೀಯರು ಯಾರೂ ಕೂಡ ಮುಂದೆ ಬಂದಿರಲಿಲ್ಲ.

ಹಿಂದೂವಿನ ಅಂತ್ಯಕ್ರಿಯೆ ಮಾಡಿ ಮುಸ್ಲಿಮರು ನಿಜವಾಗಿಸಿದರು

ಯಾಧವರಾವ್​ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಯಾಧವರಾವ್​ಪ್ರಾಣ ಬಿಟ್ಟಿರುವ ಸುದ್ದಿ ತಿಳಿದ ಬಡಾವಣೆಯ ಕೆಲ ಮುಸ್ಲಿಂ ಯುವಕರ ತಂಡ, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡು, ಹಿಂದೂ ಧರ್ಮದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಗರದ ಖಾನಾಪೂರ ರಸ್ತೆಯಲ್ಲಿಯ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಈ ಮೂಲಕ ಕೋಮು ಸೌರ್ಹಾದತೆಗೆ ಸಾಕ್ಷಿಯಾಗಿದ್ದಾರೆ. ಯುವಕರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Last Updated : Apr 25, 2021, 10:00 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.