ಬೀದರ್: ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಮೆಕಾನಿಕ್ ಒಬ್ಬರ ಮೇಲೆ ಮಂಗ ದಾಳಿ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದಿದೆ.
ಬಸ್ ಡೀಪೊದ ಕಾರ್ಮಿಕ ವಿಭಾಗದಲ್ಲಿ ಮೆಕಾನಿಕ್ ಕೆಲಸ ಮಾಡ್ತಿದ್ದ ಸಂತೋಷ್ ಎಂಬಾತನ ಮೇಲೆ ಕೋತಿ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳದಲ್ಲೇ ಇದ್ದ ಇತರ ಸಿಬ್ಬಂದಿ ಸಹಾಯ ಮಾಡಿದ್ದಾರೆ.