ಬೀದರ್: ಹಳ್ಳಿಗಳ ಜ್ವಲಂತ ಸಮಸ್ಯೆಗಳು, ಪರಿಹಾರಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಗಂಭೀರವಾಗಿ ಚರ್ಚೆ ನಡೆಯುತ್ತಿರುವ ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಗಡದ್ ನಿದ್ದೆಗೆ ಜಾರಿದ್ದು ಸಾಕಷ್ಟು ಸದ್ದು ಮಾಡಿದೆ.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪಂಚಾಯತ್ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ 15 ನಿಮಿಷಕ್ಕೂ ಅಧಿಕ ಕಾಲ ಶಾಸಕ ಬಿ.ನಾರಾಯಣರಾವ್ ನಿದ್ರಾಲೋಕದಲ್ಲಿ ತೇಲಾಡಿದರು.
ಜಿಲ್ಲೆಯ ಗಂಭೀರ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವಾಗ ಶಾಸಕರು ತುಂಬಿದ ಸಭೆಯಲ್ಲಿ ನಿದ್ರಾವಸ್ಥೆಗೆ ಜಾರಿಕೊಂಡರು. ಈ ವೇಳೆ ಸಭೆಯಲ್ಲಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳ ಗುಸು ಗುಸು ಚರ್ಚೆಗೆ ಕಾರಣವಾಯಿತು.