ETV Bharat / state

ಸಚಿವ ಪ್ರಭು ಚೌಹಾಣ್‌ ಕಾಲಿಗೆ ಬಿದ್ದು ಅಳಲು ತೋಡಿಕೊಂಡ ವಿಶೇಷಚೇತನರು...!

author img

By

Published : Oct 19, 2019, 10:12 PM IST

ನಗರದ ವಿವಿಧ ಬಡಾವಣೆಗಳಿಗೆ ಸಚಿವ ಪ್ರಭು ಚೌಹಾಣ್‌ ದಿಢೀರ್​ ಭೇಟಿ ನೀಡಿ ಅಲ್ಲಿ ಶುಚಿ ಇಲ್ಲದಿರೋದನ್ನ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವ ಚವ್ಹಾಣ

ಬೀದರ್ : ಮಾಶಾಸನ, ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಹಾಕಿ ಕಚೇರಿ ಸುತ್ತ ಸುತ್ತಾಡಿ ಸುಸ್ತಾದ ವಿಶೇಷಚೇತನರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಅವರ ಕಾಲಿಗೆ ಬಿದ್ದು ಅಳಲು ತೋಡಿಕೊಂಡ ಘಟನೆ ನಡೆದಿದೆ.

ನಗರಸಭೆಗೆ ದಿಢೀರ್ ಭೇಟಿ‌ ನೀಡಿದ ಸಚಿವ ಪ್ರಭು ಚೌಹಾಣ್‌ ಅವರ ಮುಂದೆ ವಿಶೇಷಚೇತನರು ನಮಗೆ ನಗರಸಭೆ ಅಧಿಕಾರಿ ಸ್ವಾಮಿದಾಸ ಎಂಬಾತರು ಕೊಡಬಾರದ ಕಾಟ ಕೊಡ್ತಿದ್ದಾರೆ. ಮಾಸಾಶನ, ತ್ರಿಚಕ್ರ ವಾಹನ ಮಂಜೂರು ಮಾಡಲು ವರ್ಷಗಟ್ಟಲೇ ಸುತ್ತಾಡಿಸಿದ್ದಾರೆ. ಅವರನ್ನು ಸುಮ್ಮನೆ ಬಿಡ ಬೇಡಿ ಎಂದು ಆಕ್ರೋಶ ಹೊರ ಹಾಕಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಭು ಚವ್ಹಾಣ

ಈ ವೇಳೆಯಲ್ಲಿ ಸ್ಥಳದಲ್ಲೇ ಇದ್ದ ನಗರಸಭೆ ಆಯುಕ್ತ ಬಸಪ್ಪ ಅವರು ಸ್ವಾಮಿದಾಸ ಭಾಲ್ಕಿ ಹಾಗೂ ಬೀದರ್ ನಗರಸಭೆಯಲ್ಲಿ ಕೆಲಸ ಮಾಡ್ತಾರೆ ಎಂದರು. ಇದಕ್ಕೆ ಗರಂ ಆದ ಸಚಿವ ಚೌಹಾಣ್‌ ಆ ಅಧಿಕಾರಿಯನ್ನು ಕೂಡಲೇ ನಗರಸಭೆಯಿಂದ ಬಿಡುಗಡೆ ಮಾಡಿ, ಇಲ್ಲ ಅಂದ್ರೇ ನೆಟ್ಟಗಿರೋದಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಅಲ್ಲದೇ ನಗರದ ವಿವಿಧ ಬಡಾವಣೆಗಳಿಗೆ ದಿಢೀರ್​ ಭೇಟಿ ನೀಡಿದ ಸಚಿವ ಚೌಹಾಣ್‌ ಅವರು ನಗರದ ಬಸ್ ನಿಲ್ದಾಣದ ಎದುರು ಮೂರು ವರ್ಷಗಳಿಂದ ಚರಂಡಿಯಲ್ಲಿ ಹೊಳು ತುಂಬಿಕೊಂಡು ಸ್ಥಳೀಯ ಅಂಗಡಿಗಳಲ್ಲಿ ಚರಂಡಿ ನೀರು ಹರಿಯುತ್ತಿರುವುದನ್ನು ಗಮನಿಸಿದ ಸಚಿವರು ಇಷ್ಟೊಂದು ಮಟ್ಟದಲ್ಲಿ ನಿರ್ಲಕ್ಷ್ಯ ಮಾಡ್ತೀರಾ, ಚರಂಡಿ ಸ್ವಚ್ಛ ಮಾಡಲಿಕ್ಕೆ ನಿಮಗೇನ್ ಸಮಸ್ಯೆ? ನಿಮಗೆ ಮಾಡಲಿಕ್ಕ ಆಗೋದಿಲ್ಲ ಅಂದ್ರೇ ಹೇಳಿ ನಾನೇ ಮಾಡ್ತೀನಿ ಎಂದು ನಗರಸಭೆ ಆಯುಕ್ತ ಬಸಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರಸಭೆ ಕಚೇರಿಗೆ ಭೇಟಿ ನೀಡಿದ ಪ್ರಭು ಚೌಹಾಣ್‌ ಅವರು, ಕಚೇರಿಗೆ ಅನಗತ್ಯ ಗೈರು ಹಾಜರಾದ ಸಿಬ್ಬಂದಿಗೆ ನೋಟಿಸ್ ನೀಡಿ ಅಮಾನತು ಮಾಡುವಂತೆ ಸೂಚಿಸಿದರು. ಅಲ್ಲದೆ ನಗರಸಭೆ ಮೂಲೆಯೊಂದರಲ್ಲಿ ತಾಜ್ಯ ವಿಲೇವಾರಿಯಾಗದ ರಾಶಿ ಹಾಕಲಾಗಿತ್ತು. ಇದನ್ನು ಕಂಡ ಸಚಿವ ಚೌಹಾಣ್‌ ತಕ್ಷಣ ಇವುಗಳನ್ನು ಸಾರ್ವಜನಿಕರಿಗೆ ಸರಬರಾಜು ಮಾಡಬೇಕು. ಸರ್ಕಾರ ನೀಡಿದ ಸಲಕರಣೆ ಹೀಗೆ ಮೂಲೆಗುಂಪಾಗಿಸುವುದು ಎಷ್ಟು ಸರಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Intro:ಚರಂಡಿ ಸ್ವಚ್ಚ ನಿವ್ ಮಾಡಿಲ್ಲ ಅಂದ್ರೆ ನಾನೇ ಮಾಡ್ತಿನಿ- ಸಚಿವ ಚವ್ಹಾಣ ಪುಲ್ ಗರಂ...!

ಬೀದರ್:
ಹದಗೆಟ್ಟ ಚರಂಡಿ ದುರಾವಸ್ಥೆಯಿಂದ ಸಾರ್ವಜನಿಕರು ಅನಾರೋಗ್ಯಕ್ಕಿಡಾಗಿ ಆಸ್ಪತ್ರೆ ಸೇರುತ್ತಿದ್ದರು ಕಣ್ಮುಚ್ಚಿ ಕುಳಿತುಕೊಂಡಿದ್ದಿರಾ ನಿವು ಚರಂಡಿ ಸ್ವಚ್ಚ ಮಾಡಲಿಲ್ಲ ಅಂದ್ರೆ ನಾನೇ ಖುದ್ದಾಗಿ ಮಾಡ್ತಿನಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ನಗರಸಭೆ ಅಧಿಕಾರಿಗಳ ಮೇಲೆ ಫುಲ್ ಗರಂ ಆದರು.

ನಗರದ ವಿವಿಧ ಬಡಾವಣೆಗಳಲ್ಲಿ ದಿಡೀರ್ ಭೇಟಿ ನೀಡಿದ ಸಚಿವ ಚವ್ಹಾಣ ಅವರು ನಗರದ ಬಸ್ ನಿಲ್ದಾಣದ ಎದುರು ಮೂರು ವರ್ಷಗಳಿಂದ ಚರಂಡಿಯಲ್ಲಿ ಹೊಳು ತುಂಬಕೊಂಡು ಸ್ಥಳೀಯ ಅಂಗಡಿಗಳಲ್ಲಿ ಚರಂಡಿ ನೀರು ಹರಿಯುತ್ತಿರುವುದನ್ನು ಗಮನಿಸಿದ ಸಚಿವ ಚವ್ಹಾಣ ಇಷ್ಟೊಂದು ಮಟ್ಟದಲ್ಲಿ ನಿರ್ಲಕ್ಷ್ಯ ಮಾಡ್ತಿರಾ ಚರಂಡಿ ಸ್ವಚ್ಚ ಮಾಡಲಿಕ್ಕೆ ನಿಮಗೆನ್ ಸಮಸ್ಯೆ. ನಿಮಗೆ ಮಾಡಲಿಕ್ಕ ಆಗೊಲ್ಲ ಅಂದ್ರೆ ಹೇಳಿ ನಾನೆ ಮಾಡ್ತಿನಿ ಎಂದು ನಗರಸಭೆ ಆಯುಕ್ತ ಬಸಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೂ ಮುನ್ನ ನಗರಸಭೆ ಕಚೇರಿಗೆ ಭೇಟಿ ನೀಡಿದ ಪ್ರಭು ಚವ್ಹಾಣ ಅವರು ನಗರಸಭೆ ಗೆ ದಿಢಿರ ಭೇಟಿ ನೀಡಿದರು. ಈ ವೇಳೆಯಲ್ಲಿ ಕಚೇರಿಗೆ ಅನಗತ್ಯವಾಗಿ ಗೈರು ಹಾಜರಾದ ಸಿಬ್ಬಂಧಿಯನ್ನು ನೋಟಿಸ್ ನೀಡಿ ಅಮಾನತು ಮಾಡುವಂತೆ ಸೂಚಿಸಿದರು.

ಅಲ್ಲದೆ ನಗರಸಭೆ ಮೂಲೆಯೊಂದರಲ್ಲಿ ತಾಜ್ಯ ವಿಲೇವಾರಿ ಬಕೇಟ್ ಗಳ ರಾಶಿ ಹಾಕಲಾಗಿತ್ತು ಇದನ್ನು ಕಂಡ ಸಚಿವ ಚವ್ಹಾಣ ತಕ್ಷಣ ಇವುಗಳನ್ನು ಸಾರ್ವಜನಿಕರಿಗೆ ಸರಬರಾಜು ಮಾಡಬೇಕು. ಸರ್ಕಾರ ನೀಡಿದ ಸಲಕರಣೆ ಹೀಗೆ ಮೂಲೆಗುಂಪಾಗಿಸುವುದು ಎಷ್ಟು ಸರಿ ಎಂದು ಅಸಮಾಧಾನ ಹೊರ ಹಾಕಿದರು.

ಬೈಟ್-೦೧: ಪ್ರಭು ಚವ್ಹಾಣ- ಸಚಿವರು

Body:ಅನೀಲ

Conclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.