ಬೀದರ್: ಕುರಿ ಸಾಕಣಿಕೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಮಹಾರಾಷ್ಟ್ರದ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಪ್ರಗತಿಪರ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಠಾಣಾ ಜಿಲ್ಲೆಯ ಮುಂಬರಾ, ಖರಂಡಿಯಲ್ಲಿರುವ ಆಸಿಫ್ ಶೇಖ್ ಅವರ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ವಿವಿಧ ತಳಿಯ ಕುರಿ ಸಾಕಣಿಕೆ ಕುರಿತು ಸಮಗ್ರ ಮಾಹಿತಿ ಪಡೆದಿದ್ದಾರೆ. ರಾಜಸ್ಥಾನದ ಶಿರೋಹಿ ತಳಿ, ಪಂಜಾಬ್ನ ಬೀರಲ ತಳಿ, ಉತ್ತರ ಪ್ರದೇಶದ ಜಮನಪೂರಿ ತಳಿ ಹಾಗೂ ಅಸ್ಸೋಂ ಬಂಟಮ್ ತಳಿಗಳ ಕುರಿತು ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿಯೂ ಇಂಥ ವಿವಿಧ ತಳಿಗಳನ್ನು ಸಾಕುವ ಮೂಲಕ, ಲಾಭದಾಯಕ ಪಶು ಸಂಗೋಪನೆಗೆ ಯೋಜನೆ ರೂಪಿಸಲು ಸಚಿವರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.