ETV Bharat / state

ಬೆಳೆ ಮಾಹಿತಿಗೆ ಮೊಬೈಲ್ ಆ್ಯಪ್ ತಪ್ಪದೇ ಬಳಸಿ: ಶಾಸಕ ಬಿ. ನಾರಾಯಣರಾವ್​

ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅರ್ಹ ರೈತರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಬಿ. ನಾರಾಯಣರಾವ್ ಸೂಚಿಸಿದರು.

B. Narayanarao
ಬೆಳೆ ಮಾಹಿತಿಗೆ ಮೊಬೈಲ್ ಆ್ಯಪ್ ತಪ್ಪದೇ ಬಳಸಿಕೊಳ್ಳಿ: ಶಾಸಕ ಬಿ.ನಾರಾಯಣರಾವ್​
author img

By

Published : Aug 18, 2020, 1:46 PM IST

ಬಸವಕಲ್ಯಾಣ: ತಾಲೂಕಿನ ಖಾನಾಪೂರ ಗ್ರಾಮದ ರೈತ ಮಹಿಳೆ ಶರಣಮ್ಮ ಅವರ ಜಮೀನಿಗೆ ಭೇಟಿ ನೀಡಿದ ಶಾಸಕ ಬಿ. ನಾರಾಯಣರಾವ್​ ಅವರು, ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಳಕೆಯನ್ನು ಖುದ್ದು ವೀಕ್ಷಿಸಿದರು. ಬಳಿಕ ಬೆಳೆ ಸಮೀಕ್ಷೆ ಯೋಜನೆ ಕುರಿತು ಮಾಹಿತಿ ಪಡೆದರು.

ಖಾನಾಪೂರ ಗ್ರಾಮದ ರೈತ ಮಹಿಳೆ ಶರಣಮ್ಮ ಅವರ ಜಮೀನಿಗೆ ಭೇಟಿ ನೀಡಿದ ಶಾಸಕ ಬಿ.ನಾರಾಯಣರಾವ್

ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿ ಫೋಟೋ ಸಮೇತ ಅಪ್ಲೋಡ್ ಮಾಡುವ ವಿನೂತನ ಯೋಜನೆ ಇದಾಗಿದೆ. ಕರಪತ್ರ, ಪೋಸ್ಟರ್ ಮುದ್ರಿಸಿ ರೈತರಿಗೆ ವಿತರಿಸುವ ಮೂಲಕ ಬೆಳೆಗಳ ಮಾಹಿತಿಯನ್ನು ಅಪ್ಲೋಡ್ ಮಾಡುವುದರ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅರ್ಹ ರೈತರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ಹಾಗೂ ಕೃಷಿ ಅಧಿಕಾರಿ ಕೈಲಾಸ ಅವರು, ಬೆಳೆ ಸಮೀಕ್ಷೆ ಯೋಜನೆಯಡಿ ರೈತರು ಬೆಳೆಗಳ ಕುರಿತು ಮಾಹಿತಿ ಛಾಯಾಚಿತ್ರ ಸಮೇತ ಅಪ್‌ಲೋಡ್​ ಮಾಡುವುದು ಹೇಗೆ ಎನ್ನುವುದನ್ನು ವಿವರಿಸಿದರು.

ಈ ವೇಳೆ ತಾ.ಪಂ. ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ, ತಹಶೀಲ್ದಾರ್​ ಸಾವಿತ್ರಿ ಸಲಗರ್, ಲೋಕೋಪಯೋಗಿ ಇಲಾಖೆ ಎಇಇ ಜಗನ್ನಾಥ ಮಜಗೆ, ಶರಣು ಆಲಗೂಡ ಸೇರಿದಂತೆ ಪ್ರಮುಖರು ಮತ್ತು ರೈತರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.