ETV Bharat / state

ಮಾತಾ ಜಗದಂಬಾ ಜಾತ್ರಾ ಮಹೋತ್ಸವ: ಕೋಲಾಟ ಆಡಿ ಗಮನ ಸೆಳೆದ ಸಚಿವ ಪ್ರಭು ಚವ್ಹಾಣ್ - ಬೀದರ್

ಬೋಂತಿ ಘಮಸುಬಾಯಿ ತಾಂಡಾದಲ್ಲಿ ಜರುಗುತ್ತಿರುವ ಮಾತಾ ಜಗದಂಬಾ ಜಾತ್ರಾ ಮಹೋತ್ಸವ- ಕೋಲಾಟ ಆಡಿ ಗಮನ ಸೆಳೆದ ಸಚಿವ ಪ್ರಭು ಚವ್ಹಾಣ್

Maata Jagdamba fair in Bidar
ಮಾತಾ ಜಗದಂಬಾ ಜಾತ್ರೆ
author img

By

Published : Feb 13, 2023, 7:50 AM IST

ಜಾತ್ರಾ ಮಹೋತ್ಸವ- ಕೋಲಾಟ ಆಡಿ ಗಮನ ಸೆಳೆದ ಸಚಿವ ಪ್ರಭು ಚವ್ಹಾಣ್

ಬೀದರ್​: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರ ಗ್ರಾಮವಾದ ಬೋಂತಿ ಘಮಸುಬಾಯಿ ತಾಂಡಾದಲ್ಲಿ ಜರುಗುತ್ತಿರುವ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಜಾನಪದ ಕಲಾ ಪ್ರದರ್ಶನ ಜಾತ್ರೆಯ ಮೆರಗನ್ನು ಹೆಚ್ಚಿಸಿತು. ಬೆಳಗ್ಗೆ ಮಾತಾ ಜಗದಂಬಾ ಮಾತೆಯ ಧ್ವಜಾರೋಹಣದ ಮೂಲಕ ಎರಡನೇ ದಿನದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು. ದೇವಸ್ಥಾನದಲ್ಲಿ ಹೋಮ, ಹವನ, ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಭಕ್ತಿ ಭಾವದಿಂದ ನೆರವೇರಿಸಲಾಯಿತು.

75 ತಂಡಗಳಿಂದ ಕಲಾ ಪ್ರದರ್ಶನ: ಸಚಿವ ಪ್ರಭು ಚವ್ಹಾಣ್ ಅವರು ಕಲಾ ಪ್ರದರ್ಶನ ನೀಡುತ್ತಿದ್ದ ತಂಡಗಳೊಂದಿಗೆ ಭಜನೆ, ಕೋಲಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಉಜನಿ, ಚಟ್ನಾಳ, ಡೊಂಗರಗಾಂವ, ಮದನೂರ, ಸಂಗಮ್, ಹೆಡಗಾಪುರ, ದಾಬಕಾ, ಠಾಣಾ ಕುಶನೂರ್, ವಡಗಾಂವ ಸೇರಿದಂತೆ ಔರಾದ ಹಾಗೂ ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 75 ತಂಡಗಳು ಭಜನೆ, ಕೋಲಾಟ, ತಮಟೆ ವಾದನ, ಡೊಳ್ಳು ಕುಣಿತ, ಬಂಜಾರಾ ನೃತ್ಯ ಸೇರಿದಂತೆ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ನೀಡಿದವು. ಬಳಿಕ ಕಲಾವಿದರಿಗೆ ಸಚಿವರು ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಿದರು.

ಜಗದಂಬಾ ದೇವಿಯ ಮಹಿಮೆ ಅಪಾರ: ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪ್ರಭು ಚವ್ಹಾಣ್ 'ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಮಹಿಮೆ ಅಪಾರ. ಕಷ್ಟ ಹೇಳಿಕೊಂಡು ಬರುವ ಭಕ್ತರ ದುಃಖ ದುಮ್ಮಾನಗಳು ದೂರವಾಗುತ್ತವೆ' ಎಂದು ತಿಳಿಸಿದರು. ಕರ್ನಾಟಕವಲ್ಲದೇ ಮಹಾರಾಷ್ಟ್ರ ಮತ್ತು ತೆಲಂಗಾಣಾ ರಾಜ್ಯಗಳ ಭಕ್ತರು ತಾಂಡಾಗೆ ಬಂದು ಇಚ್ಛಾಪೂರ್ತಿಯ ದರ್ಶನ ಪಡೆಯುತ್ತಾರೆ. ಈ ಜಾತ್ರೆಯ ವೈಭವ ಕಂಡು ಸಂತೋಷವಾಗುತ್ತಿದೆ. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸುವ ಉದ್ದೇಶದಿಂದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

ನನ್ನ ಮೇಲೆ ಇಚ್ಛಾಪೂರ್ತಿ ಜಗದಂಬಾ ಮಾತೆಯ ಕೃಪೆ ಹಾಗೂ ಔರಾದ ಕ್ಷೇತ್ರದ ಜನತೆಯ ಆಶೀರ್ವಾದವಿದೆ. ಹಾಗಾಗಿ ನಿಷ್ಕಳಂಕವಾಗಿ ಜನ ಸೇವೆ ಮಾಡಲು ಸಾಧ್ಯವಾಗಿದೆ. ನಾನು ಮಾಡುವ ಅಭಿವೃದ್ಧಿ ಕೆಲಸಗಳನ್ನು ಸಹಿಸದ ಕೆಲವರಿಂದ ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತಿವೆ. ದೇವಿ ಮತ್ತು ಜನತೆಯ ಆಶೀರ್ವಾದ ಇರುವವರೆಗೆ ಇದಾವುದೂ ನಡೆಯಲ್ಲ ಎಂದು ಇದೇ ವೇಳೆ ತಿಳಿಸಿದರು.

2008ರಿಂದ ನಿರಂತರವಾಗಿ ಜನಸೇವೆ ಮಾಡುತ್ತಾ ಬಂದಿದ್ದೇನೆ. ನನ್ನ ಕ್ಷೇತ್ರ ಔರಾದ ಮತ್ತು ಜನತೆಯ ವಿಕಾಸದ ಸಂಕಲ್ಪದೊಂದಿಗೆ ಸೇವೆ ಮಾಡುತ್ತಿದ್ದೇನೆ. ಔರಾದ ಮತ್ತು ಕಮಲನಗರ ತಾಲೂಕುಗಳಲ್ಲಿ ಅಭಿವೃದ್ಧಿ ಕೆಲಸಗಳ ಜತೆಗೆ ಜನತೆ ಶಾಂತಿಯುತ ಜೀವನ ನಡೆಸುವಂತಹ ವಾತಾವರಣ ನಿರ್ಮಿಸಿದ್ದೇನೆ. ನನ್ನ ಗುರುಗಳ ಸಲಹೆಯಂತೆ ಯಾವುದೇ ಫಲಾಪೇಕ್ಷೆ ಇಲ್ಲದೇ ಜನಸೇವೆ ಮಾಡುತ್ತಿದ್ದೇನೆ. ಜನತೆಯೂ ನನಗೆ ಅಷ್ಟೇ ಪ್ರೀತಿ ನೀಡಿದ್ದಾರೆ ಎಂದು ಹೇಳಿದರು.

ಜಾತ್ರಾ ಮಹೋತ್ಸವದಲ್ಲಿ ವಸಂತ ಬಿರಾದಾರ, ಶರಣಪ್ಪಾ ಪಂಚಾಕ್ಷರಿ, ಸುರೇಶ ಭೋಸ್ಲೆ, ಶಿವಾಜಿ ಪಾಟೀಲ ಮುಂಗನಾಳ, ಶಿವಾಜಿರಾವ ಕಾಳೆ, ಶಕುಂತಲಾ ಮುತ್ತಂಗೆ, ಸಚಿನ್ ರಾಠೋಡ, ಮಾರುತಿ ಪವಾರ, ಪಂಡರಿನಾಥ ರಾಠೋಡ, ಡಾ.ಕಲ್ಲಪ್ಪಾ ಉಪ್ಪೆ, ಶಿವರಾಜ ಅಲ್ಮಾಜೆ, ಗಿರೀಶ ವಡೆಯರ್, ದೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ ಸೇರಿದಂತೆ ವಿವಿಧ ಮಠಗಳ ಪೂಜ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಚಿವ ಪ್ರಭು ಚವ್ಹಾಣ್ ನಿವಾಸದಲ್ಲಿ ಹೋಳಿ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.