ETV Bharat / state

ಹುಮನಾಬಾದ್​ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜೋಡಿ, ಓಡಿ ಹೋಗಿ ಮದುವೆ! - ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣ

ಕ್ವಾರಂಟೈನ್ ಕೇಂದ್ರದಿಂದ ಪ್ರೇಮಿಗಳು ಪರಾರಿಯಾಗಿದ್ದು, ತಮ್ಮೂರಿಗೆ ಹೋಗಿ ಮದುವೆ ಆಗಿರುವ ವಿಚಿತ್ರ ಪ್ರಕರಣ ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

Lovers escaped from the Quarantine Center
ಕ್ವಾರಂಟೈನ್ ಕೇಂದ್ರದಿಂದ ಪ್ರೇಮಿಗಳು ಪರಾರಿ
author img

By

Published : May 27, 2020, 7:33 PM IST

ಬೀದರ್: ಮಹಾರಾಷ್ಟ್ರದಿಂದ ವಾಪಸಾಗಿದ್ದ ಯುವಕ-ಯುವತಿ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದಾರೆ. ಬಳಿಕ ಈ ಪ್ರೇಮಿಗಳು ತಮ್ಮೂರಿಗೆ ಹೋಗಿ ಮದುವೆ ಆಗಿರುವ ವಿಚಿತ್ರ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ಇದ್ದ ಐನಾಪೂರ್ ಗ್ರಾಮದ ಮಾಣಿಕ(27) ಹಾಗೂ ಪನ್ನಳ್ಳಿ ಗ್ರಾಮದ ರಮಾಬಾಯಿ (22) ಅವರು ಓಡಿಹೋಗಿ ಮದುವೆ ಆದವರು. ಈ ಇಬ್ಬರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಇಂದು ನಸುಕಿನಜಾವ ಮದುವೆ ಆಗಿದ್ದಾರೆ.

ಪೂರ್ವ ನಿಗದಿತ ಸಂಬಂಧ ಇದಾಗಿದ್ದು, ಮಹಾರಾಷ್ಟ್ರದ ಮುಂಬೈನಲ್ಲಿ ಕೆಲಸಕ್ಕೆ ಹೋಗಿದ್ದರು. ಕೊರೊನಾ ಭೀತಿಯಿಂದ ಇತ್ತೀಚೆಗಷ್ಟೇ ಊರಿಗೆ ವಾಪಸಾಗಿದ್ದರು. ಇಬ್ಬರು ಮಹಾರಾಷ್ಟ್ರದಿಂದ ಬಂದಿರುವುದರಿಂದ ಇವರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಆದ್ರೆ ಮಂಗಳವಾರ ರಾತ್ರಿ ರಮಾಬಾಯಿ ಹಾಗೂ ಮಾಣಿಕ ಇಬ್ಬರು ಯಾರಿಗೂ ಕಾಣದಂತೆ ಪರಾರಿ ಆಗಿದ್ದರು.

ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ತಾಲೂಕು ಕೋವಿಡ್-19 ನೋಡಲ್ ಅಧಿಕಾರಿ ಗೋವಿಂದಪ್ಪ ಅವರಿಗೆ ಯುವತಿ ರಮಾಬಾಯಿಗೆ ಸ್ವಂತ ಊರು ಪನ್ನಳ್ಳಿಯಲ್ಲಿ ಮದುವೆ ನಡೆದಿರುವುದು ಗೊತ್ತಾಗಿದೆ. ಹೀಗಾಗಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಪ್ರಾಥಮಿಕವಾಗಿ ಎರಡು ಕುಟುಂಬದ ಸದಸ್ಯರು ಸೇರಿದಂತೆ ನವ ದಂಪತಿ ವಿರುದ್ಧ ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.