ಬೀದರ್: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗುತ್ತಿದ್ದಂತೆ ನಗರದ ಹಳೇ ಸಿಟಿ ಭಾಗವನ್ನು ಹಾಟ್ ಸ್ಪಾಟ್ ಎಂದು ಘೋಷಣೆ ಮಾಡಲಾಗಿದೆ. ಇಂದು ಜಿಲ್ಲಾಡಳಿತ ಲಾಕ್ಡೌನ್ 2.0 ಮತ್ತಷ್ಟು ಬಿಗಿಗೊಳಿಸಿದೆ.
ದೆಹಲಿಯ ತಬ್ಲಿಘಿ ಜಮಾತ್ಗೆ ಹೋಗಿ ಬಂದವರ ಒಡನಾಟದಲ್ಲಿದ್ದ ಮೊದಲ ಹಂತದ ಸೋಂಕಿತರು ಹಾಗೂ 2ನೇ ಹಂತದ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ.
ನಗರದ ಪ್ರಮುಖ ಭಾಗಗಳಲ್ಲಿ ಅಗ್ನಿಶಾಮಕ ವಾಹನ ಬಳಸಿ ಔಷಧಿ ಸಿಂಪಡಣೆ ಮಾಡಲಾಯಿತು. ನಯಾ ಕಮಾನ್ ಗೇಟ್, ಪೊಲೀಸರ ವಾಹನಗಳು ಹಾಗೂ ಬ್ಯಾರಿಕೇಡ್ಗಳಿಗೂ ಸಿಂಪಡಣೆ ಮಾಡಿದರು.
ಇನ್ನು ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಸವಾರರಿಗೆ ಮೈಚಳಿ ಬಿಡಿಸಿದ್ದು, ಕೆಲ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದರು.