ETV Bharat / state

ಬಸವಕಲ್ಯಾಣದ ಜನರಿಗೆ ರೋಗ ಭಾಗ್ಯ, ಕಾರಣ!? - ಬಸವಕಲ್ಯಾಣದಲ್ಲಿ ಮೂಲಭೂತ ಸೌಲಭ್ಯದ ಕೊರತೆ

ಬಸವಕಲ್ಯಾಣದಲ್ಲಿ ಬಡಾವಣೆಯೊಂದರಲ್ಲಿ ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ವಿಪರಿತವಾಗಿದ್ದು, ಮಕ್ಕಳು, ವೃದ್ದರಲ್ಲಿ ವಾಂತಿ ಭೇದಿ ಸೇರಿ ವಿವಿಧ ಸಾಂಕ್ರಾಮಿಕ ಕಾಯಿಲೆಗಳು ಹರಡಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

fsdccd
ಬಸವಕಲ್ಯಾಣದ ಜನರಿಗೆ ರೋಗ ಭಾಗ್ಯ,ಕಾರಣ!?
author img

By

Published : Nov 29, 2019, 1:01 PM IST

Updated : Nov 29, 2019, 1:19 PM IST

ಬಸವಕಲ್ಯಾಣ​( ಬೀದರ್​): ಜಿಲ್ಲೆಯ ಬಸವಕಲ್ಯಾಣದ ವಾರ್ಡ್ ನಂ 11 ಹಾಗೂ ವಾರ್ಡ್ 4ರ ಮಧ್ಯೆ ಬರುವ ಅನ್ವರ್​ಪೇಟ್, ನರಿಗಾರಗಲ್ಲಿಯಲ್ಲಿ ಪ್ರವೇಶಗಳು ಸೂಕ್ತ ಮೂಲ ಸೌಕರ್ಯವಿಲ್ಲದೇ ಕೊರಗುತ್ತಿದ್ದು, ಅಲ್ಲಿಗೆ ಹೋದ್ರೆ ಸಾಕು ಗಬ್ಬೆದ್ದು ನಾರುತ್ತಿವೆ.

ಬಸವಕಲ್ಯಾಣದ ಜನರಿಗೆ ರೋಗ ಭಾಗ್ಯ,ಕಾರಣ!?

ಹೌದು ಅಲ್ಲಿ ನಿಲ್ಲೋಕೆ ಆಗದಷ್ಟು ಮಲ ಮೂತ್ರದ ದುರ್ಗಂಧ ಬೀರುತ್ತದೆ. ಸರಿಯಾದ ರಸ್ತೆ ಇಲ್ಲ. ಹೆಸರಿಗೆ ಮಾತ್ರ ಎನ್ನುವಂತೆ ಚರಂಡಿ ವ್ಯವಸ್ಥೆ ಇದ್ದರೂ ಅದನ್ನ ಸ್ವಚ್ಚಗೊಳಿಸಿ ಎಷ್ಟು ತಿಂಗಳು ಕಳೆದಿವೆಯೋ ಗೊತ್ತಾಗುತ್ತಿಲ್ಲ. ಮಣ್ಣಿನ ರಸ್ತೆ ಇದ್ರು ಅದರಲ್ಲಿ ಹರಡಿದ ಚರಂಡಿ ನೀರಿನಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಲ್ಲಿಯಲ್ಲಿಯ ರಸ್ತೆ ಬದಿಗೆ ಇರುವ ಚರಂಡಿಗಳಲ್ಲಿ ನೀರು ತುಂಬಿ ತುಳುಕ್ಕುತ್ತಿದೆ.

ನಗರದ ಮೂಲ ಸೌಕರ್ಯಗಳ ಅಭಿವೃದ್ದಿಗೆಂದು ವಿವಿಧ ಯೋಜನೆಗಳ ಮೂಲಕ ಸರ್ಕಾರದಿಂದ ನಗರಸಭೆಗೆ ಕೋಟ್ಯಂತರ ರೂ.ಅನುದಾನ ಹರಿದು ಬರುತಿದ್ದರೂ ಇದುವರೆಗೂ ಇಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿಲ್ಲ. ಸ್ವಚ್ಚತೆಗೆ ಎಂದು ಸಾಕಷ್ಟು ಸಿಬ್ಬಂದಿ ನಮ್ಮ ಗಲ್ಲಿಯಲ್ಲಿ ಸ್ವಚ್ಚ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Intro:(ಇದನ್ನ ಪ್ಯಾಕೇಜ್ ವರದಿ ಮಾಡಿಕೊಳ್ಳಿ ಸರ್)

(ಗಮನಕ್ಕೆ: ಈ ಸುದ್ದಿ ಬಸವಕಲ್ಯಾಣ ಡೆಟ್‌ಲೈನ್ ಮೇಲೆ ಹಾಕಿಕೊಳ್ಳಿ ಹಾಗೆ ಸುದ್ದಿಯ ಕೊನೆಯಲ್ಲಿ ಈ ಟಿವಿ ಭಾರತ ಬಸವಕಲ್ಯಾಣ ಅಂತ ಹೇಳಿ.)

೭ ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಗಲ್ಲಿಯಲ್ಲಿ ಕಾಲಿಟ್ಟರೆ ಸಾಕು ಇಡೀ ಏರಿಯಾಕ್ಕೆ ಏರಿಯಾನೆ ದುರ್ನಾತದ ವಾಸನೆ. ಐದು ನಿಮಿಷ ನಿಂತ್ರೆ ನೀವು ತಲೆ ತಿರುಗಿ ಬೀಳೋದು ಗ್ಯಾರಂಟಿ, ಇನ್ನು ಅದಕ್ಕೂ ಹೆಚ್ಚಿನ ಸಮಯ ಅಲ್ಲಿ ಕಾಲ ಕಳೆದ್ರೆ ವಾಂತಿ ಭೇದಿ ಮಾಡಿಕೊಂಡು ಆಸ್ಪತ್ರೆ ಸೇರೋದಂತು ಪಕ್ಕಾ.
ಹೌದು ಇದು ಯಾದವುದೋ ಕೊಳಚೆ ಪ್ರದೇಶದ ಕಥೆ ಅಲ್ಲ. ಬದಲಾಗಿ ನಮ್ಮ ನಗರದ ಬಡಾವಣೆಯೊಂದರ ನೈಜ ಸ್ಥಿತಿ ಇದು. ಹಾಗಾದ್ರೆ ಅಲ್ಲಿ ಜನ ವಾಸ ಮಾಡ್ತಿಲ್ವಾ, ಅವರೆಲ್ಲ ಹೇಗೆ ಇರ್ತಾರೆ ಅಂತೇನಾದ್ರು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಿದ್ರೆ ನೀವೋಮ್ಮೆ ಅಲ್ಲಿಗೆ ಹೋಗಿ ಬಂದ್ರೆ ಮಾತ್ರ ಅಲ್ಲಿಯ ನಿಜವಾದ ಸ್ಥಿತಿ ಅರ್ಥವಾಗೊದು.
ನಗರದ ವಾರ್ಡ್ ನಂ. ೧೧ ಹಾಗೂ ವಾರ್ಡ್ ೪ರ ಮಧ್ಯೆ ಬರುವ ಅನ್ವರಪೇಟ್, ನರಿಗಾರಗಲ್ಲಿಯಲ್ಲಿ ಪ್ರವೇಶ ಮಾಡಿದ್ರೆ ಸಾಕು. ಅಲ್ಲಿ ನಿಲ್ಲೊಕೆ ಆಗದಷ್ಟು ಮಲ ಮೂತ್ರದ ದುರ್ಗಂಧ ಬೀರುತ್ತದೆ. ಸರಿಯಾದ ರಸ್ತೆ ಇಲ್ಲ. ಹೆಸರಿಗೆ ಮಾತ್ರ ಎನ್ನುವಂತೆ ಚರಂಡಿ ವ್ಯವಸ್ಥೆ ಇದ್ದರು ಅದನ್ನ ಸ್ವಚ್ಚಗೊಳಿಸಿ ಎಷ್ಟು ತಿಂಗಳು ಕಳೇದಿವೆಯೋ ಗೊತ್ತಿಲ್ಲ.
ಮಣ್ಣಿನ ರಸ್ತೆ ಇದ್ರು ಅದರಲ್ಲಿ ಹರಡಿದ ಚರಂಡಿ ನೀರಿನಲ್ಲೆ ಓಡಾಡಬೇಕು. ಇಂಥ ವ್ಯವಸ್ಥೆ ಹೇಗಪ್ಪಾ ಜೀವನ ನಡೆಸ್ತಿರಿ.? ಅಂತ ಅಲ್ಲಿಯ ಜನರಿಗೆ ಪ್ರಶ್ನೆ ಮಾಡಿದ್ರೆ ನಮ್ ಸಮಸ್ಯೆ ಯಾರಿಗೆ ಹೇಳಬೇಕು ಸರ್.? ಹೇಗೋ ಬದುಕ್ತಿದ್ದಿವಿ, ಇದನ್ನ ಬಿಟ್ರೆ ಬೇರೆ ಗತಿ ಇಲ್ವಲ ನಮಗೆ ಅಂತ ಅಸಯಾಹಕತೆ ವ್ಯಕ್ತಪಡಿಸ್ತಾರೆ.
ಗಲ್ಲಿಯಲ್ಲಿಯ ರಸ್ತೆ ಬದಿಗೆ ಇರುವ ಚರಂಡಿಗಳಲ್ಲಿ ಕೊಳೆತ ನೀರು ತುಂಬಿ ತುಳುಕ್ಕುತ್ತಿವೆ. ಚರಂಡಿಯಲ್ಲಿ ನೀರಿಗೆ ಮುಂದೆ ಹರಿದು ಹೊಗಲು ಸಾಧ್ಯವಾಗದೆ ಅಲ್ಲಲ್ಲಿ ರಸ್ತೆಗೆ ಆಕ್ರಮಿಸಿಕೊಂಡಿವೆ. ದಿನ ಬೆಳಗಾದರೆ ಇಲ್ಲಿಯ ಜನರು ಇಂಥ ದುರ್ನಾತದಿಂದ ಕೂಡಿದ ರಸ್ತೆಯಲ್ಲಿಯೇ ಓಡಾಡಬೇಕು. ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ವಿಪರಿತವಾಗಿದ್ದು, ಮಕ್ಕಳು, ವೃದ್ದರು ಸೇರಿದಂತೆ ಓಣಿ ನಿವಾಸಿಗಳಿಗೆ ವಾಂತಿ ಭೇಧಿ ಸೇರಿದಂತೆ ವಿವಿಧ ಸಾಂಕ್ರಾಮಿಕ ಕಾಯಿಲೆಗಳು ಹರಡಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತಿದೆ.
ಓಣಿ ಜನರಿಗೆ ಶೌಚಾಲಯಕ್ಕೆಂದು ರಸ್ತೆ ಬದಿ ನಗರಸಭೆಯಿಂದ ಎರಡು ಶೌಚಾಲಯ ಕಟ್ಟಿಸಲಾಗಿದೆ. ಆದರೆ ಅವು ಸ್ವಚ್ಚಗೊಳಿಸಿ ಅದೇಷ್ಟು ತಿಂಗಳು ಕಳೆದಿವೆಯೋ ಅಂತ ಯಾರಿಗೂ ಗೊತ್ತಿಲ್ಲ. ಅಸ್ವಚ್ಚ ಶೌಚಾಯಲದಿಂದ ಇಡಿ ಓಣಿಯಲ್ಲಿ ಮಲ ಮೂತ್ರದ ದುರ್ವಾಸನೆ ಉಸಿರುವ ಕಟ್ಟುವಂಥ ವಾತಾವರಣ ನಿರ್ಮಾಣಗೊಂಡಿದೆ, ನಮ್ಮ ಸಮಸ್ಯೆ ಯಾರು ಸಹ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುತ್ತಾರೆ ಬಡವಾಣೆ ನಿವಾಸಿ ಮಹ್ಮದ್ ಯುಸೂಫ್ ಖುರೇಶಿ.
ನಗರದ ಮೂಲ ಸೌಕರ್ಯಗಳ ಅಭಿವೃದ್ದಿಗೆಂದು ವಿವಿಧ ಯೋಜನೆಗಳ ಮೂಲಕ ಸರ್ಕಾರದಿಂದ ನಗರಸಭೆಗೆ ಕೋಟ್ಯಾಂತರ ರೂ.ಅನುದಾನ ಹರಿದು ಬರುತಿದ್ದರು ಇದುವರೆಗೂ ಇಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿಲ್ಲ. ಸ್ವಚ್ಚತೆಗೆಂದು ಸಾಕಷ್ಟು ಜನ ಸಿಬ್ಬಂದಿಗಳಿದ್ದರೂ ನಮ್ಮ ಗಲ್ಲಿಯಲ್ಲಿ ಸ್ವಚ್ಚತೆಗಾಗಿ ಯಾರು ಮುಖ ಮಾಡಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೈಟ್-೧
ಬಸಿರ್ ಮಿಯ್ಯಾ ಖರೇಶಿ
ಸ್ಥಳೀಯ ನಿವಾಸಿ
(ಇವನ ಮಿಸೆ ಮತ್ತು ದಾಡಿ ಕಪ್ಪು ಬಿಳುಪು ಇವೆ. ಇತನ ಹಿಂದೆ ಮೊಬೈಲ್ ಟರವ್ ಕಾಣಿಸುತ್ತಿದೆ)

ಬೈಟ್-೨
ಶಾಂತಮ್ಮ ಕಾಂಬಳೆ
ಸ್ಥಳೀಯ ನಿವಾಸಿ
( ಇವರು ಗುಲಾಬಿ ಬಣ್ಣದ ಕುಬಸಾ ತೊಟ್ಟಿದ್ದಾರೆ.)

ಬೈಟ್-೩
ಅಕ್ಲಾಕ್ ಚೌದ್ರಿ
ಸ್ಥಳೀಯ ನಿವಾಸಿ
( ಈತನ ಹಿಂದೆ ಬಯಲಿನಲ್ಲಿ ಇಂಡಿಕಾ ಕಾರು ನಿಂತಿದೆ)

ಬೈಟ್-೪
ಮಹ್ಮದ್ ಯುಸೂಫ್ ಖುರೇಶಿ
( ಈತ ಕೊರಳಲ್ಲಿ ಟವಲ್ ಹಾಕಿಕೊಂಡಿದ್ದಾನೆ.)

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
Last Updated : Nov 29, 2019, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.