ETV Bharat / state

ಬೀದರ್​​ನಲ್ಲಿ ಕಾರ್ಗಿಲ್​​​ ವಿಜಯ ದಿವಸ್ ಆಚರಣೆ​​​​: ಬಾನಂಗಳದಲ್ಲಿ ಹಾರಾಡಿದ ಸೂರ್ಯ ಕಿರಣ - KARGIL VIJAY DIVAS

ಬೀದರ್​​ನ ವಾಯು ನೆಲೆಯಲ್ಲಿ ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಆಚರಿಸಲಾಯಿತು. ಈ ವೇಳೆ ಸೂರ್ಯ ಕಿರಣ ತಂಡದಿಂದ ವೈಮಾನಿಕ ಪ್ರದರ್ಶನ ನಡೆಯಿತು.

ಕಾರ್ಗಿಲ್ ವಿಜಯ ದಿವಸ
author img

By

Published : Jul 25, 2019, 3:15 AM IST

Updated : Jul 25, 2019, 3:57 AM IST

ಬೀದರ್: ಇಲ್ಲಿನ ವಾಯು ನೆಲೆಯಲ್ಲಿ ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಆಚರಿಸಲಾಯಿತು. ಈ ವೇಳೆ ಸೂರ್ಯ ಕಿರಣ ತಂಡದಿಂದ ವೈಮಾನಿಕ ಪ್ರದರ್ಶನ ನಡೆಯಿತು.

ಕಾರ್ಗಿಲ್ ವಿಜಯ ದಿವಸ್​

ಬಾನಂಗಳಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಜನ ಮನ ಸೋತರು. ಸೂರ್ಯ ಕಿರಣ ವಿಮಾನಗಳ ತಂಡ ವೈಮಾನಿಕ ಪ್ರದರ್ಶನದ ಮೂಲಕ ಗಮನ ಸೆಳೆಯಿತು.

ಕಾರ್ಗಿಲ್ ವಿಜಯೋತ್ಸವಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಸೂರ್ಯ ಕಿರಣ ಗ್ರೂಪ್ ಕ್ಯಾಪ್ಟನ್ ಪ್ರಶಾಂತ ಗ್ರೂವರ್ ನೇತ್ರತ್ವದಲ್ಲಿ ಆರು ಸೂರ್ಯ ಕಿರಣ ವಿಮಾನಗಳು ಬಾನಂಗಳಕ್ಕೆ ಜಿಗಿದು ಪ್ರದರ್ಶನ ನೀಡುವ ಮೂಲಕ ನೆರೆದ ಪ್ರೇಕ್ಷಕರ ಗಮನ ಸೆಳೆದವು.

ದೂರದ ಚೈನಾ ಮುಂತಾದ ದೇಶಗಳಲ್ಲಿ ಈ ಸೂರ್ಯ ಕಿರಣ ತಂಡ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ಹನ್ನೆರಡು ಸೂರ್ಯ ಕಿರಣ ವಿಮಾನಗಳ ತಂಡ ಇಲ್ಲಿದ್ದು, ಸುಖೋಯ್​​, ಮೀರಾಜ್, ಮಿಗ್ ಯುದ್ಧ ವಿಮಾನಗಳ ಚಾಲನೆ ಮಾಡಿರುವ ಅನುಭವಿ ಪೈಲೆಟ್​​ಗಳನ್ನ ಸೂರ್ಯ ಕಿರಣ ವಿಮಾನಗಳ ಚಲಾವಣೆ ಮಾಡಲು ನಿಯುಕ್ತಿ ಮಾಡಲಾಗಿದೆ.

ಕ್ಯಾಪ್ಟನ್ ಪ್ರಶಾಂತ ಗ್ರೋವರ್, ಟೀಂ ಲೀಡರ್, ಸ್ಕ್ವಾಡ್ರನ್ ಲಿಡರ್​ಗಳಾದ ಟಿ.ದಶರಥಿ, ಸಾಹಿಲ್, ಅಭಿಜಿತ್, ಎಂ.ಮಿಶ್ರಾ, ಎಸ್.ಕಾರ್ತಿಕ್, ಟಿ.ಸಿಂಗ್, ವಿಂಗ್ ಕಮಾಂಡರ್​​ಗಳಾದ ಎಸ್.ಅರೋರಾ, ವಿ.ಟಿ.ಶೆಲ್ಕೆ, ಎಂ.ನೌಟಿಯಾಲ್, ಅನೂಪ್ ಸಿಂಗ್, ಯು.ಮೆಹ್ತಾ, ಡಿ.ಎ.ನಾಗೇಂದ್ರ, ಫ್ಲೈಟ್ ಲೆಫ್ಟಿನೆಂಟ್ ಸುದರ್ಶನ್ ತಂಡ ವಿಮಾನಗಳನ್ನು ಹಾರಿಸಿ ನೋಡುಗರ ಗಮನ ಸೆಳೆಯಿತು.

Intro:(ಮಾನ್ಯರ ಗಮನಕ್ಕೆ: ಸ್ಟೋರಿಗೆ ನನ್ನ ಹತ್ರ ಅಕಾರ್ಡೇಶನ್ ಕಾರ್ಡ್ ಇಲ್ಲದಕ್ಕೆ ವಾಯು ತರಬೇತಿ ನೇಲದಲ್ಲಿ ಪ್ರವೇಶ ಸಿಗಲಿಲ್ಲ ಹೀಗಾಗಿ ನಮ್ಮ ಲೋಗೊ ಇದರಲ್ಲಿಲ್ಲ.)

ಕಾರ್ಗಿಲ್ ವಿಜಯ ದಿವಸ : ಬಾನಂಗಳದಲ್ಲಿ ಹಾರಾಡಿದ ಸೂರ್ಯ ಕಿರಣ...!

ಬೀದರ್:
ಕಾರ್ಗಿಲ್ ವಿಜೇಯೋತ್ಸವ ದಿನಾಚರಣೆ ನಿಮಿತ್ತ ಕೆಂಪು ನೆಲದ ಬೀದರ್ ನ ವಾಯು ನೆಲೆಯಲ್ಲಿ ಇಂದು ಕಾರ್ಗಿಲ್ ವಿಜೇಯೋತ್ಸವದ 20ನೇ ವರ್ಷಾಚರಣೆಯನ್ನ ಸೂರ್ಯಕಿರಣ ತಂಡದಿಂದ ವೈಮಾನಿಕ ಪ್ರದರ್ಶನದ ಮೂಲಕ ಅದ್ದುರಿಯಾಗಿ ಆಚರಿಸಲಾಯಿತು. ಬಾನಂಗಳಲ್ಲಿ ವಿವಿಧ ಭಂಗಿಯ ಲೋಹದ ಹಕ್ಕಿಗಳ ಹಾರಾಟಕ್ಕೆ ಮನಸೋತ ಜನರ ಹೆಮ್ಮೆಯ ಸೂರ್ಯಕಿರಣ ವಿಮಾನಗಳ ತಂಡ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಬೀದರ್ ವಾಸು ಸೇನೆಯ ಸಿಬ್ಬಂಧಿಗಳು, ಕೇಂದ್ರಿಯ ವಿದ್ಯಾಲಯದ ಮಕ್ಕಳು ಉಪಸ್ಥಿತರಿದ್ದರ್ರು.

ವೈ.ಓ:
ಬಾನಂಗಳದಲ್ಲಿ ಸೂರ್ಯಕಿರಣ ತಂಡದ ಮೈ ಜುಮ್ಮೆನ್ನುವ ಪ್ರದರ್ಶನ. ಎಲ್ಲೆಲ್ಲು ಜೈಹಿಂದ ಘೋಷಣೆ. ಇಡಿ ಬೀದರ್ ಬಾನಂಗಳಲ್ಲಿ ಗಮನ ಸಳೆದ ಸೂರ್ಯಕಿರಣ ವಿಮಾನಗಳ ಪ್ರದರ್ಶನ. ಈ ದ್ರಶ್ಯಗಳು ಕಂಡು ಬಂದಿದ್ದು ಬೀದರ್ ವಾಯು ನೆಲೆಯಲ್ಲಿ. ಕಾರ್ಗಿಲ್ ವಿಜೇಯೋತ್ಸವಕ್ಕೆ 20ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ಕಾರ್ಗಿಲ್ ವಿಜೇಯೋತ್ಸವದ ಅದ್ದುರಿ ಆಚರಣೆಯನ್ನ ಹಮ್ಮಿಕೊಳ್ಳಲಾಗಿತ್ತು. ಸೂರ್ಯ ಕಿರಣ ತಂಡದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ ಗ್ರೂವರ್ ನೇತ್ರತ್ವದಲ್ಲಿ ಆರು ಸೂರ್ಯಕಿರಣ ವಿಮಾನಗಳ ತಂಡ ಬಾನಂಗಳಕ್ಕೆ ಜಿಗಿದು ವಿವಿಧ ಪ್ರದರ್ಶನ ನೀಡುವ ಮೂಲಕ ನೆರೆದ ಪ್ರೇಕ್ಷಕರ ಗಮನ ಸೆಳೆಯಿತು. ದೂರದ ಚೈನಾ ಮುಂತಾದ ದೇಶಗಳಲ್ಲಿ ಈ ಸೂರ್ಯಕಿರಣ ತಂಡ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ.ಹಂಥಾ ತಂಡದ ತಾಣ ನಮ್ಮ ರಾಜ್ಯದ ಬೀದರ್ ವಾಯು ನೆಲೆ ಅನ್ನೋದು ನಮ್ಮ ಹೆಮ್ಮೆ. ಕಾರ್ಗಿಲ್ ವಿಜೇಯೋತ್ಸವದ ಹಿನ್ನಲೆಯಲ್ಲಿ ಇಂದು ಆಯೋಜನೆ ಮಾಡಿದ ಪ್ರದರ್ಶನದಲ್ಲಿ ಈ ಸೂರ್ಯ ಕಿರಣ ವಿಮಾನಗಳನ್ನ ಹತ್ತಿರದಿಂದ ನೋಡುವ ಸೌಭಾಗ್ಯ ಇಲ್ಲಿನ ವಾಯು ನೆಲಯ ಅಧಿಕಾರಿಗಳು ಕಲ್ಪಿಸಿದ್ರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ ಗ್ರೂವರ್ ಕಾರ್ಗಿಲ್ ವಿಜೇಯೋತ್ಸವವನ್ನ ಸ್ಮರಿಸಿದ್ರು.

ಬೈಟ್-01: ಗ್ರೂಪ್ ಕ್ಯಾಪ್ಟನ್ ಪ್ರಶಾಂತ ಗ್ರೂವರ್.

ವೈ.ಓ:
ಹನ್ನೆರಡು ಸೂರ್ಯಕಿರಣ ವಿಮಾನಗಳ ತಂಡ ಇಲ್ಲಿದ್ದು,ಬಹುತೇಕ ಸ್ಕ್ವಾಡ್ರನ್ ಲೀಡರ್ ಗಳು ಸುಖೋಯಿ, ಮೀರಾಜ್, ಮಿಗ್ ಯುದ್ದ ವಿಮಾನಗಳ ಚಾಲನೆ ಮಾಡಿರುವ ಅನುಭವಿ ಪೈಲೆಟ್ ಗಳನ್ನ ಸೂರ್ಯಕಿರಣ ವಿಮಾನಗಳ ಚಲಾವಣೆ ಮಾಡಲು ನಿಯುಕ್ತಿ ಮಾಡಲಾಗಿದೆ. ಇಲ್ಲಿರುವ ಸೂರ್ಯಕಿರಣ ವಿಮಾನಗಳಿಗೆ ಕ್ಯಾಪ್ಟನ್ ಪ್ರಶಾಂತ ಗ್ರೋವರ್, ಟೀಮ್ ಲೀಡರ್ ಸ್ಕ್ವಾಡ್ರನ್ ಲಿಡರ್ ಗಳಾದ ಟಿ.ದಶರಥಿ, ಸಾಹಿಲ್, ಅಭಿಜಿತ್,ಎಂ.ಮಿಶ್ರಾ, ಎಸ್.ಕಾರ್ತಿಕ್,ಟಿ.ಸಿಂಗ್,ವಿಂಗ್ ಕಮಾಂಡರ್ ಗಳಾದ ಎಸ್.ಅರೋರಾ, ವಿಟಿ ಶೆಲ್ಕೆ,ಎಂ.ನೌಟಿಯಾಲ್,ಅನೂಪ್ ಸಿಂಗ್,ಯೂ ಮೆಹ್ತಾ, ಡಿಎ ನಾಗೇಂದ್ರ, ಪ್ಲೈಟ್ ಲೆಫ್ಟ್ ನೆಂಟ್ ಸುದರ್ಶನ್ ತಂಡ ಇದಾಗಿದ್ದು ಇಂದು ನಡೆದ ವೈಮಾನಿಕ ಪ್ರದರ್ಶನದಲ್ಲಿ ಆರು ಸೂರ್ಯಕಿರಣ ವಿಮಾನಗಳ ತಂಡ ಭಾಗಿಯಾಗಿತ್ತು. ಸೂರ್ಯಕಿರಣ ವಿಮಾನಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಬೈಟ್-02: ಮೇಘಾ- ವಿದ್ಯಾರ್ಥಿನಿ

ವೈ.ಓ:
ಒಟ್ಟಾರೆ ಬೀದರ್ ವಾಯು ತರಬೇತಿ ನೆಲೆಯಲ್ಲಿ ಇಂದು ನಡೆದ ಕಾರ್ಗಿಲ್ ವಿಜೇಯೋತ್ಸವ ಎಲಲ್ರ ಗಮನ ಸೆಳೆಯಿತು.ಕಲಿಯುವ ಮಕ್ಕಳಿಗೆ ಲೋಹದ ಹಕ್ಕಿಗಳ ಹಾರಾಟವನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಇಲ್ಲಿನ ವಾಯು ನೆಲೆಯ ಅಧಿಕಾರಿಗಳು ಕಲ್ಪಿಸಿದ್ರು.ಕಳೆದ 1999ರಲ್ಲಿ ನಡೆದ ಕಾರ್ಗಿಲ್ ನಲ್ಲಿ ಅಡಗಿ ಕುಳಿತ ವೈರಿ ಪಡೆಯನ್ನ ಭಾರತೀಯ ವಾಯು ಪಡೆ ಬಗ್ಗು ಬಡೆದಿತ್ತು.ಈ ಹಿನ್ನಲೆಯಲ್ಲಿ ಕಾರ್ಗಿಲ್ ವಿಜೇಯೋತ್ಸವ ಆಚರಣೆ ಇಂದು ಅದ್ದುರಿಯಾಗಿ ನಡೆದಿದ್ದಲ್ಲದೆ ಸೂರ್ಯಕಿರಣ ವಿಮಾನಗಳ ಪ್ರದರ್ಶನ ಎಲ್ಲರ ಮೆಚ್ಚುಗೆ ಪಾತ್ರವಾಯಿತು.
----- ಈಟಿವಿ ಭಾರತ ಬೀದರ್-----Body:ಅನೀಲConclusion:ಬೀದರ್
Last Updated : Jul 25, 2019, 3:57 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.