ETV Bharat / state

ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಈಶ್ವರ್​ ಖಂಡ್ರೆ ಚಾಲನೆ... ಗಡಿ ದಾಟುವವರಿಗೆ ಎಚ್ಚರಿಕೆ

ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ.

Ishwar Khandre inauguration drug spray in Bhalki town
ಭಾಲ್ಕಿ ಪಟ್ಟಣದಲ್ಲಿ ಔಷಧಿ ಸಿಂಪಡಣೆಗೆ ಈಶ್ವರ ಖಂಡ್ರೆ ಚಾಲನೆ
author img

By

Published : Apr 16, 2020, 5:53 PM IST

ಬೀದರ್: ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಚಾಲನೆ ನೀಡಿದರು.

ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಈಶ್ವರ್​ ಖಂಡ್ರೆ ಚಾಲನೆ
ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಕಲಾದ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಖುದ್ದು ಈಶ್ವರ್​ ಖಂಡ್ರೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ಪಟ್ಟಣದ ಪ್ರತಿಯೊಂದು ಬಡಾವಣೆ ಸೇರಿದಂತೆ ಜನರು ಸೇರುವಂತಹ ಸ್ಥಳಗಳಲ್ಲಿ ಸೂಕ್ಷ್ಮವಾಗಿ ಔಷಧ ಸಿಂಪಡಣೆ ಮಾಡುವಂತೆ ಸಲಹೆ ನೀಡಿದರು. ಅಲ್ಲದೇ ಮಹಾರಾಷ್ಟ್ರ ಗಡಿಯಲ್ಲಿರುವ ಅಟ್ಟರಗಾ ಚೆಕ್ ಪೋಸ್ಟ್​ಗೆ ದಿಢೀರ್​ ಭೇಟಿ ನೀಡಿ ನೆರೆ ರಾಜ್ಯದಿಂದ ಯಾರೇ ಬಂದಿದ್ದರೂ ಕೂಡ ರಾಜ್ಯಕ್ಕೆ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಲಾಕ್​ಡೌನ್ ಇನ್ನಷ್ಟು ಕಠಿಣವಾಗಲಿದ್ದು, ಮೇ 3ರವರೆಗೆ ಸಾರ್ವಜನಿಕರು ಸುರಕ್ಷಿತವಾಗಿ ಮನೆಯಲ್ಲೇ ಇರಬೇಕು. ಅನಗತ್ಯವಾಗಿ ರಸ್ತೆಗೆ ಬಂದ್ರೆ ಅಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.