ಬೀದರ್ : ನಶೆ ಏರಿಸುವ ಅಕ್ರಮ ಔಷಧಿಗಳ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 25 ಕೊರೆಕ್ಸ್ ಬಾಟಲ್ ಜಪ್ತಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದ ಹೊರ ವಲಯದಲ್ಲಿ ಘಾಟಬೊರಾಳನಿಂದ ಭಾಲ್ಕಿಗೆ ಅಕ್ರಮವಾಗಿ ಕಾಡಿಎಂ (ಕೊರೆಕ್ಸ್) ಮತ್ತೇರಿಸುವ ಔಷಧಿ ಸಾಗಾಟ ಮಾಡುತ್ತಿದ್ದ ಬಬ್ರುವಾಹನ, ಅನಿಲ ಹಾಗೂ ರತ್ನ ಎಂಬಾತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾಕ್ಡೌನ್ನಿಂದಾಗಿ ಮದ್ಯ ನಿಷೇಧ ಹಿನ್ನೆಲೆಯಲ್ಲಿ ಅಕ್ರಮವಾಗಿ ನಶೆ ಏರಿಸುವ ವಸ್ತುಗಳ ಸಾಗಾಟ ಮಾಡುತ್ತಿದ್ದ ಬಂಧಿತ ಆರೋಪಿಗಳಿಂದ ಡೈಕ್ನೋಫೇನಾಕ್ ಆಂಡ್ ಅಸೆಟಾಮಿನೋಫೇನ್ ಮಾತ್ರೆಗಳು, ಕಾಡಿಎಂ ಸಿರಪ್ ಬಾಟಲ್ಗಳು ಹಾಗೂ 12,000 ರುಪಾಯಿ ನಗದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿವೈಎಸ್ಪಿ ಡಾ.ದೇವರಾಜ್ ಬಿ ಅವರ ನೇತೃತ್ವದಲ್ಲಿ ಪಿಎಸ್ಐ ಅಮರ ಕುಲಕರ್ಣಿ, ಸಿಬ್ಬಂದಿಗಳಾದ ಶಿವಪ್ಪ ಪವಾರ ಹಾಗೂ ಹವಾನ ಪೂಜಾರಿ ದಾಳಿ ಮಾಡಿದ್ದಾರೆ.