ETV Bharat / state

ಹುಂಡಿ ಹಣ ಕಳವು: ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ.. - ಬಸವಕಲ್ಯಾಣದ ದೇವಸ್ಥಾನದಲ್ಲಿ ಹಣ ಕಳವು

ಘಾಟ್ ಹಿಪ್ಪರ್ಗಾ ಗ್ರಾಮದ ಹೊರವಲಯದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಸುಮಾರು 50ರಿಂದ 60ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕಳೆದ 16ರಂದು ಸಂಜೆ 7ರ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿ ಲೈಟ್​ಗಳನ್ನು ಬಂದ್ ಮಾಡಿ ಹುಂಡಿ ಬೀಗ ಮುರಿದು ಹಣ ದೋಚಿದ್ದಾನೆ.

hundi-money-stolen-in-ramalingeshwara-temple-at-basavakalyana
ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ
author img

By

Published : Oct 18, 2021, 8:20 PM IST

ಬಸವಕಲ್ಯಾಣ: ತಾಲೂಕಿನ ದೇವಸ್ಥಾನವೊಂದರ ಹುಂಡಿಯಲ್ಲಿದ್ದ ಹಣವನ್ನು ಖದೀಮನೊಬ್ಬ ದೋಚಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ

ಘಾಟ್ ಹಿಪ್ಪರ್ಗಾ ಗ್ರಾಮದ ಹೊರವಲಯದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಸುಮಾರು 50 ರಿಂದ 60ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕಳೆದ 16ರಂದು ಸಂಜೆ 7ರ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿ ಲೈಟ್​ಗಳನ್ನು ಬಂದ್ ಮಾಡಿ ಹುಂಡಿ ಬೀಗ ಮುರಿದು ಹಣ ದೋಚಿದ್ದಾನೆ.

ಬೆಳಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಹುಂಡಿಯಲ್ಲಿದ್ದ ಸುಮಾರು 30ರಿಂದ 40 ಸಾವಿರದಷ್ಟು ಹಣ ಕಳವು ಮಾಡಲಾಗಿದೆ ಎಂದು ದೇವಸ್ಥಾನ ಮಂಡಳಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿ ತಿಳಿದ ಹುಮನಾಬಾದ್​ ಡಿವೈಎಸ್​ಪಿ ಸೋಮಲಿಂಗ ಕುಂಬಾರ್, ಮಂಠಾಳ ಸಿಪಿಐ ರಘುವೀರ್​ಸಿಂಗ್​ ಠಾಕೂರ್​, ಪಿಎಸ್ಐ ಬಸಲಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಓದಿ: ಎಣ್ಣೆ ಏಟಲ್ಲಿ ಗುಂಡೇಟು..ಅಪ್ರಾಪ್ತರ ಕ್ರೌರ್ಯಕ್ಕೆ ಚಹಾ ಮಾರುವವನ ಸ್ಥಿತಿ ಗಂಭೀರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.