ETV Bharat / state

ಬಿರುಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆ: ಬೀದರ್​ನಲ್ಲಿ ನೆಲಕಚ್ಚಿದ ಮಾವು - Heavy rain in Bidar damages the crop

ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

dffff
ಬೀದರ್​ನಲ್ಲಿ ಧರೆಗುರುಳಿದ ಮಾವು
author img

By

Published : Apr 18, 2020, 1:56 PM IST

ಬೀದರ್​/ಬಸವಕಲ್ಯಾಣ: ತಾಲೂಕಿನ ರಾಜೇಶ್ವರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಗುಡುಗು-ಮಿಂಚು, ಬಿರುಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ಬೀದರ್​ನಲ್ಲಿ ನೆಲಕಚ್ಚಿದ ಮಾವು

ಅರ್ಧ ಗಂಟೆ ಬಿರುಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಿಶ್ರಿತ ಮಳೆಗೆ ಮಾವಿನ ಕಾಯಿಗಳು ನೆಲಕ್ಕುರುಳಿವೆ. ಹೊಲ-ತೋಟಗಳಲ್ಲಿದ್ದ ಬೆಳೆಗಳು ಹಾನಿಗೀಡಾಗಿವೆ. ಯರಬಾಗ್ ಗ್ರಾಮದ ಸಂಜುರೆಡ್ಡಿ ಎಂಬುವವರ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಮಾವಿನ ಕಾಯಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಅಣ್ಣೆಪ್ಪ ಮಾನಕರ್ ಎಂಬ ರೈತನ ಹೊಲದಲ್ಲಿ ಕಟಾವಿಗೆ ಬಂದಿದ್ದ ಜವಿ ಗೋಧಿ ಬೆಳೆ ಮಳೆಗೆ ಹಾನಿಗೀಡಾಗಿದ್ದು, ರಾಶಿ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಅಕಾಲಿಕ ಮಳೆ ಆರಂಭವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.