ETV Bharat / state

'ಬೀದರ್​ನಲ್ಲಿ ಕೊರೊನಾ ವೈರಸ್ ಇಲ್ಲ, ಶಂಕಿತ ರೋಗಿಗಳ ಪರೀಕ್ಷೆ ಮಾಡಲಾಗಿದೆ ಅಷ್ಟೇ'

ಬೀದರ್​ನಲ್ಲಿ ಕೊರೊನಾ ವೈರಸ್ ಇಲ್ಲ. ಶಂಕಿತ ರೋಗಿಗಳ ಪರೀಕ್ಷೆ ಮಾಡಲಾಗಿದೆ ಅಷ್ಟೇ. ಕೊರೊನಾ ವೈರಸ್​ ಬಗ್ಗೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಬ್ರೀಮ್ಸ್​ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

No coronavirus, No coronavirus in Bidar, Health officer said No coronavirus in Bidar, ಕೊರೊನಾ ವೈರಸ್​ ಇಲ್ಲ, ಬೀದರ್​ನಲ್ಲಿ ಕೊರೊನಾ ವೈರಸ್​ ಇಲ್ಲ, ಬೀದರ್​ನಲ್ಲಿ ಕೊರೊನಾ ವೈರಸ್​ ಇಲ್ಲ ಎಂದ ವೈದ್ಯಾಧಿಕಾರಿ, ಬೀದರ್​ನಲ್ಲಿ ಕೊರೊನಾ ವೈರಸ್​ ಇಲ್ಲ ಸುದ್ದಿ,
ಬೀದರ್​ನಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ವೈರಸ್
author img

By

Published : Mar 4, 2020, 9:06 PM IST

Updated : Mar 4, 2020, 10:33 PM IST

ಬೀದರ್: ನಾರ್ವೆ ಹಾಗೂ ಕತಾರ್ ದೇಶದಿಂದ ಮರಳಿದ ಶಂಕಿತ ರೋಗಿಗಳಿಬ್ಬರ ರಕ್ತ ಮಾದರಿ ಪರೀಕ್ಷೆಗೊಳಪಡಿಸಿದ್ದು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಪೀಡಿತರು ಪತ್ತೆಯಾಗಿಲ್ಲ ಎಂದು ಬ್ರಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಅಂತೇಪ್ಪಾ ಸ್ಪಷ್ಟವಾಗಿ ಹೇಳಿದ್ದಾರೆ.

ಬೀದರ್​ನಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ವೈರಸ್

ಜಿಲ್ಲಾಸ್ಪತ್ರೆಯ ಕೊರೊನಾ ಸ್ಪೆಶಲ್ ವಾರ್ಡ್​ನಲ್ಲಿ ರೋಗಿಗಳು ದಾಖಲಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್​ ಎಫೆಕ್ಟ್ ಆರಂಭವಾಗಿದೆ ಎಂಬ ಸುಳ್ಳು ಸುದ್ದಿ ಹರಡಿದೆ. ಆಸ್ಪತ್ರೆಯಲ್ಲಿ ವಿದೇಶದಿಂದ ಜ್ವರ, ನೆಗಡಿ ಬಾಧೆಯಿಂದ ಬಳಲುತ್ತಿದ್ದ ರೋಗಿಗಳ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಕಳೆದ ಎರಡು ವಾರದ ಹಿಂದಷ್ಟೇ ನಾರ್ವೆಯಿಂದ ಬಂದ ಹನುಮಂತ ಹಾಗೂ ಕತಾರ್ ದೇಶದಿಂದ ಬಂದ ಶಿವಕುಮಾರ್ ಹಾಗೂ ಅವರ ಪುತ್ರ ಸೇರಿ ಒಟ್ಟು ಮೂರು ಮಂದಿಯ ರಕ್ತದ ಮಾದರಿಯನ್ನು ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.

ಹೊರ ದೇಶದಿಂದ ಬಂದ ಜನರು ಜ್ವರದಿಂದ ನರಳುತ್ತಿರುವಾಗ ಮುನ್ನೆಚ್ಚರಿಕೆ ಕ್ರಮವಾಗಿ ರಕ್ತ ಹಾಗೂ ಕಫದ ಮಾದರಿ ಪರೀಕ್ಷೆ ಅನಿವಾರ್ಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಈ ಮೂವರು ರೋಗಿಗಳನ್ನು ಸಂಶಯದ ಆಧಾರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿ 'ಈಟಿವಿ ಭಾರತ್ 'ಗೆ ಹೇಳಿದ್ದಾರೆ.

ಜಿಲ್ಲಾಧಿಕಾರಿಯಿಂದ ತುರ್ತು ಸಭೆ

ಕೊರೊನಾ ವೈರಸ್ ಜಿಲ್ಲೆಗೆ ಕಾಲಿಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲು ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ಅವರು ತುರ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಸಹಕಾರ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಬಹುತೇಕ ಇಲಾಖೆ ಸಹಕಾರದಿಂದ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು ಬಿಗಿಗೊಳಿಸುವುದು, ಕೊರೊನಾ ವೈರಸ್ ಬಗ್ಗೆ ಇಲಾಖೆಗಳು ಮುಂಜಾಗೃತೆ ವಹಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

Last Updated : Mar 4, 2020, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.