ETV Bharat / state

ರಸ್ತೆ ಅಪಘಾತದಲ್ಲಿ ಏಳು ಮಹಿಳೆಯರ ಸಾವು: ಸೂಕ್ತ ಪರಿಹಾರಕ್ಕೆ ಹೆಚ್ ಡಿಕೆ ಆಗ್ರಹ - bidar road accident

ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಮಳಖೇಡಾ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಉಡಬನಳ್ಳಿ ಗ್ರಾಮದ 7 ಜನ ಮಹಿಳೆಯರು ದುರ್ಮರಣ ಹೊಂದಿರುವ ಸುದ್ದಿ ಕೇಳಿ ನನಗೆ ತೀವ್ರ ಆಘಾತ ಉಂಟಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

hd-kumaraswamy-reacts-on-bidar-road-accident
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
author img

By

Published : Nov 5, 2022, 5:45 PM IST

ಬೆಂಗಳೂರು : ಚಿಟಗುಪ್ಪ ತಾಲೂಕಿನ ಬೆಮಳಖೇಡಾ ಬಳಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ ದಿನಕೂಲಿ ಕೆಲಸ ಮಾಡುವ 7 ಮಹಿಳೆಯರು ಸಾವನ್ನಪ್ಪಿದ್ದಾರೆ, ಈ ಕುರಿತು ಟ್ವೀಟ್ ಮಾಡಿರುವ, ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅಘಾತಕಾರಿ ವಿಷಯ ಕೇಳಿ ಬಹಳ ನೋವಾಗುತ್ತಿದೆ ಎಲ್ಲರೂ ಕೃಷಿ ಕಾರ್ಮಿಕರು, ಕೆಲಸ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ಮರಳುತ್ತಿರುವಾಗ ಈ ದುರಂತ ಸಂಭವಿಸಿದೆ.

ಅಗತ್ಯ ನೆರವಿಗೆ ಆಗ್ರಹ: ಕೂಲಿ ಮಾಡಿಕೊಂಡು ಬದುಕಿದ್ದ ಇವರ ಕುಟುಂಬಗಳಲ್ಲಿ ಈಗ ಕತ್ತಲು ಆವರಿಸಿದೆ. ರಾಜ್ಯ ಸರಕಾರ ಕೂಡಲೇ ಈ ಕುಟುಂಬಗಳ ನೆರವಿಗೆ ಧಾವಿಸಿ ಅಗತ್ಯ ಪರಿಹಾರ, ಮತ್ತಿತರೆ ನೆರವು ನೀಡಬೇಕು ಮತ್ತು ಎಲ್ಲ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ ಟ್ವಿಟರ್​​ ನಲ್ಲಿ ತಿಳಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ಕಡು ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬಗಳಿಗೆ ದಯಪಾಲಿಸಲಿ. ಗಾಯಗೊಂಡ ಎಲ್ಲರೂ ತ್ವರಿತವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಬೀದರ್ ಬಳಿ ಭೀಕರ ಅಪಘಾತ: ಕೂಲಿ ಕೆಲಸ ಮುಗಿಸಿ ಬರುತ್ತಿದ್ದ 7 ಮಹಿಳೆಯರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.