ETV Bharat / state

ವಿದ್ಯಾರ್ಥಿನಿಯರಿಗೆ ಕಿರುಕುಳ.. ಜಿಲ್ಲಾಧಿಕಾರಿಗೆ ವರದಿ, ಪ್ರಾಂಶುಪಾಲರ ವಿರುದ್ಧ ಫೋಕ್ಸೋ ಪ್ರಕರಣ - ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ

ವಿದ್ಯಾರ್ಥಿನಿಯರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ನೀಡಿದ್ದ ವರದಿಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದ್ದು, ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೆರೆಗೆ ಪ್ರಾಂಶುಪಾಲರ ವಿರುದ್ಧ ದೂರು ದಾಖಲಾಗಿದೆ.

POCSO case against principal in Bidar  Harassment of student  student sexual Harassment by Principal  ವಿದ್ಯಾರ್ಥಿನಿಯರಿಗೆ ಕಿರುಕುಳ  ಪ್ರಾಂಶುಪಾಲ ವಿರುದ್ಧ ಫೋಕ್ಸೋ ಪ್ರಕರಣ  ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ವರದಿ  ಪ್ರಾಂಶುಪಾಲ ವಿರುದ್ಧ ಪ್ರಕರಣ  ಮುರಾರ್ಜಿ ದೇಸಾಯಿ ವಸತಿ ಶಾಲೆ  ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ  ವಿದ್ಯಾರ್ಥಿನಿಯರು ಗಂಭೀರ ಸ್ವರೂಪದ ಆರೋಪ
ವಿದ್ಯಾರ್ಥಿನಿಯರಿಗೆ ಕಿರುಕುಳ
author img

By

Published : Jul 21, 2023, 10:09 PM IST

ಬೀದರ್​: ತಾಲೂಕಿನ ಹಳ್ಳಿಖೇಡ್ (ಕೆ) ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲೆ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಲೆಯ 20ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಂಭೀರ ಸ್ವರೂಪದ ಆರೋಪ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಐದು ಜನ ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿದ್ದರು. ಈ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿದ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರಿನ ಮೇಲೆ ಚಿಟಗುಪ್ಪ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ: ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಲೈಂಗಿಕ ಕಿರುಕುಳ ಬಗ್ಗೆ 20 ರಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿಯನ್ನಾದರಿಸಿ ಜಿಲ್ಲಾಧಿಕಾರಿಗಳು ಐವರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಈ ಬಗ್ಗೆ ವರದಿ ಸಲ್ಲಿಸುವಂತೆ ತಿಳಿಸಿತ್ತು.

ಅದರಂತೆ ಸದರಿ ತಂಡವು ನಿನ್ನೆ ದಿನ ವಸತಿ ಶಾಲೆಗೆ ಭೇಟಿ ನೀಡಿದ್ದ ತಂಡ ಮೊದಲಿಗೆ ಪ್ರಾಂಶುಪಾಲ ನಾಗಶೆಟ್ಟಿಯನ್ನು ವಿಚಾರಣೆ ನಡೆಸಿತು. ಬಳಿಕ ಭೋದಕ ಮತ್ತು ಭೋದಕೇತರ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿತು. ಇದಾದ ಬಳಿಕ 8ನೇ, 9ನೇ ಮತ್ತು 10ನೇ ತರಗತಿಯ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಎಲ್ಲರ ಮೌಖಿಕ ಮತ್ತು ಲಿಖಿತ ಹೇಳಿಕೆಗಳನ್ನು ಪಡೆದುಕೊಂಡರು.

ಮಕ್ಕಳಿಗೆ ಕಿರುಕುಳ: ವರದಿ ಪ್ರಕಾರ ಇದೇ ತಿಂಗಳು 7ರಂದು ವಿದ್ಯಾರ್ಥಿನಿಯೊಬ್ಬರ ಜನ್ಮದಿನವಿತ್ತು. ಹೀಗಾಗಿ ಆ ದಿನ ಬೆಳಗ್ಗೆ 9 ಗಂಟೆಗೆ ತಮ್ಮ ವಸತಿ ಗೃಹದ ಕಸಗೂಡಿಸಲು ಮಕ್ಕಳಿಗೆ ಕರೆದಿದ್ದಾರೆ. ಆ ದಿನದಿಂದ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವರದಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ: ವರದಿ ಮತ್ತು ಮಕ್ಕಳ ಹೇಳಿಕೆಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದ್ದಾರೆ. ಪ್ರಾಂಶುಪಾಲರು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವರದಿ ಮೂಲಕ ಜಿಲ್ಲಾಧಿಕಾರಿಗೆ ತಿಳಿದಿದೆ. ಕೂಡಲೇ ಅವರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈ ಘಟನೆ ಕುರಿತು ಚಿಟಗುಪ್ಪಾ ಪೊಲೀಸ್​ ಠಾಣೆಯಲ್ಲಿ ಪ್ರಾಂಶುಪಾಲರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಓದಿ: ಪ್ರತ್ಯೇಕ ಪ್ರಕರಣ: ಪ್ರಾಂಶುಪಾಲರ ವಿರುದ್ಧ ಕಿರುಕುಳ ದೂರು: ಮತ್ತೊಂದು ಪ್ರಕರಣದಲ್ಲಿ ಯುವಕನ ಲವ್ವಿಡವ್ವಿ, ಬಾಲಕಿ ಗರ್ಭಿಣಿ

ಶಿವಮೊಗ್ಗದಲ್ಲಿ ಪ್ರಾಂಶುಪಾಲರ ವಿರುದ್ಧ ದೂರು: ಶಿವಮೊಗ್ಗದ ಪ್ರತಿಷ್ಟಿತ ಪಿಯು ಕಾಲೇಜಿನ ಪ್ರಾಂಶುಪಾಲರು ತಮ್ಮದೆ ಕಾಲೇಜಿನ ವಿದ್ಯಾರ್ಥಿನಿಯ ಜೊತೆ ಸಂಪರ್ಕ ಬೆಳೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಾಂಶುಪಾಲರಿಗೆ 48 ವರ್ಷವಾಗಿದ್ದು, ವಿದ್ಯಾರ್ಥಿನಿಗೆ 17 ವರ್ಷ ವಯಸ್ಸಾಗಿದೆ. ಪಾಠ ಮಾಡುವ ವಿದ್ಯಾರ್ಥಿನಿಗೆ ನಂಬಿಸಿ, ಆಕೆಯ ಜೊತೆ ಸಂಪರ್ಕ ಬೆಳೆಸಿದ್ದರು ಎನ್ನಲಾಗಿದೆ. ಪ್ರಾಂಶುಪಾಲರು ಕಾಲೇಜಿನಲ್ಲಿ ಚೆನ್ನಾಗಿಯೇ ಪಾಠ ಮಾಡುತ್ತಿದ್ದರು. ಎಲ್ಲಾ ಮಕ್ಕಳು ಪ್ರಾಂಶುಪಾಲರ ಪಾಠವನ್ನು ಚೆನ್ನಾಗಿ ಆಲಿಸುತ್ತಿದ್ದರು. ಇದನ್ನ ಬಳಸಿಕೊಂಡ ಪ್ರಾಂಶುಪಾಲರು 17 ವರ್ಷಷ ಅಪ್ರಾಪ್ತೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.