ಬಸವಕಲ್ಯಾಣ : ನೂತನ ತಾಲೂಕು ಕೇಂದ್ರವಾಗಿರುವ ಹುಲಸೂರನಲ್ಲಿ ರಸ್ತೆ ಕಾಮಗಾರಿ ಮುಗಿದು ಒಂದು ತಿಂಗಳು ಕಳೆಯುವಷ್ಟರಲ್ಲಿಯೇ ಬಿರಕು ಬಿಟ್ಟ ರಸ್ತೆಗೆ 'ಈ ಟಿವಿ ಭಾರತ' ವರದಿಯಿಂದ ದುರಸ್ತಿ ಭಾಗ್ಯ ದೊರೆತಿದೆ.
ಹುಲಸೂರನಲ್ಲಿ ರಸ್ತೆ ಕಾಮಗಾರಿ ಮಾಡಿ ಇನ್ನು ತಿಂಗಳು ಕಳೆದಿರಲಿಲ್ಲ. ಈ ಕುರಿತು 'ಈಟಿವಿ ಭಾರತ' ಕಾಮಗಾರಿ ಮುಗಿದು ಒಂದು ತಿಂಗಳೂ ಕಳೆದಿಲ್ಲ, ಆಗಲೇ ರಸ್ತೆಯಲ್ಲಿ ಬಿರುಕು ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿಯೊಂದನ್ನು ಮಾಡಿತ್ತು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಿರುಕು ಬಿಟ್ಟ ರಸ್ತೆಯ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಲ್ಯಾಣ ಕರ್ನಾಟ ಅಭಿವೃದ್ಧಿ ನಿಗಮದ ಅನುದಾನದಡಿ 1.4 ಕೋಟಿ ರೂ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ಮಾಡಲಾಗಿದ್ದು, ಹೊಸದಾಗಿ ನಿರ್ಮಾಣ ಮಾಡಲಾದ ರಸ್ತೆಯ ಕೆಲ ಭಾಗದಲ್ಲಿ ಬಿರುಕು ಬಿಟ್ಟುರುವುದು ಕಂಡು ಬಂದಿತ್ತು. ಬಿರುಕು ಬಿಟ್ಟ ಸ್ಥಳದಲ್ಲಿ ರಸ್ತೆ ಅಗೆದು ಮರು ನಿರ್ಮಾಣ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಜಗನ್ನಾಥ್ ತಿಳಿಸಿದ್ದಾರೆ.