ಬಸವಕಲ್ಯಾಣ (ಬೀದರ್): ಕತ್ತಲೆಯನ್ನು ತೊಲಗಿಸಿ ಭಕ್ತರನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗುವಾತನೆ ನಿಜವಾದ ಗುರುವಾಗಲು ಸಾಧ್ಯ ಎಂದು ಡಾ. ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಗುರುಪೂರ್ಣಿಮ ನಿಮಿತ್ತ ಹುಲಸೂರ ಪಟ್ಟಣದ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರಿಂದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಜೀವನದಲ್ಲಿ ಹೊಸ ಜೈತ್ಯ ಶಕ್ತಿ. ಸನ್ಮಾರ್ಗವನ್ನು ತೋರಿಸುವಂತಹ ವ್ಯವಸ್ಥೆಗೆ ಗುರು ಎನ್ನುತ್ತಾರೆ. ಗುರು ಮತ್ತು ಸಮಾಜ ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ನಡೆಯಬೇಕು ಎಂದರು.
ಜಿ.ಪಂ ಪ್ರತಿ ಪಕ್ಷದ ನಾಯಕ ಸುಧೀರ ಕಾಡಾದಿ ಮಾತನಾಡಿ, ಮಾನವನ ಬದುಕು ಹಸನಾಗಬೇಕಾದರೆ ಗುರುವಿನ ಮಾರ್ಗದರ್ಶನ ಮುಖ್ಯವಾಗಿದೆ. ಪ್ರತಿಯೊಬ್ಬರೂ ಗುರುಗಳು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಯಾವುದೇ ತೊಂದರೆ ತಾಪತ್ರಯಗಳು ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾ.ಪಂ ಸದಸ್ಯೆ ರೇಖಾ ಕಾಡಾದಿ, ಶಕುಂತಲಾ ಗೌಂಡಗಾವೆ, ಪ್ರಮುಖರಾದ ರಾಜಕುಮಾರ ಮಂಗಾ, ವೈಜಿನಾಥ ಕಾಡಾದಿ, ಶಶಿಕಲಾ ಪಟ್ನೆ, ಚನ್ನಮ್ಮಾ ಸ್ವಾಮಿ, ಶ್ರೀದೇವಿ ಕೋರೆ, ಮಹಾನಂದಾ ಹುಡಗೆ, ಶ್ರೀದೇವಿ ಇಜಾರೆ, ಪ್ರಭಾವತಿ ಧಬಾಲೆ, ರೇಣುಕಾ ಬೀರಗೆ ಸೇರಿದಂತೆ ಪ್ರಮುಖರು ಪಟ್ಟಣದ ಶ್ರೀ ಡಾ. ಶಿವಾನಂದ ಸ್ವಾಮೀಜಿಗಳಿಗೆ ಗೌರವಿಸಿ, ದರ್ಶನ ಪಡೆದರು. ಇದೇ ವೇಳೆ ಭಕ್ತರಿಂದ ಭಜನೆ ಕಾರ್ಯಕ್ರಮ ಜರುಗಿತು.