ETV Bharat / state

ನೆರೆ ಸಂತ್ರಸ್ತರ ನೆರವಿಗೆ ಬಾರದ ಸರ್ಕಾರ.. ವೆಲ್ಫೇರ್​ ಪಾರ್ಟಿ ನಾಯಕರ ಕಿಡಿ.. - ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲ

ಪ್ರವಾಹ ಪೀಡಿತರ ನೆರವಿಗೆ ಧಾವಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್​​​ ಹುಸೇನ್ ಕಿಡಿಕಾರಿದ್ದಾರೆ.

ಪ್ರವಾಹ ನಿರಾಶ್ರಿತರ ನೆರವಿಗೆ ಧಾವಿಸುವಲ್ಲಿ ಸರ್ಕಾರಗಳು ವಿಫಲ
author img

By

Published : Sep 23, 2019, 10:58 PM IST

ಬಸವಕಲ್ಯಾಣ(ಬೀದರ್​​):ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಸಾವಿರಾರು ಜನ ಮನೆ,ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಂತ್ರಸ್ತರ ನೆರವಿಗೆ ಧಾವಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್​​ ಹುಸೇನ್ ಕಿಡಿಕಾರಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನಿರಾಶ್ರಿತರಿಗೆ ಸೂರು ಕಲ್ಪಿಸುವ ಜೊತೆಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಬಡ ಜನರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಭೀತಿಯಿಂದ ಜನ ತತ್ತರಿಸಿ ತಮ್ಮ ಮನೆ ಆಸ್ತಿ-ಪಾಸ್ತಿ ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾಟಾಚಾರಕ್ಕಾಗಿ ಕೇಂದ್ರ ಸರ್ಕಾರದಿಂದ ವೈಮಾನಿಕ ಸಮಿಕ್ಷೆ ನಡೆಸಿದೆ. ಸಮಿಕ್ಷೆ ನಡೆಸಿ ತಿಂಗಳುಗಳೆ ಕಳೆದರೂ ಜನರಿಗೆ ಯಾವುದೇ ಪರಿಹಾರ ಕಲ್ಪಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಂತ್ವನದ ಮಾತುಗಳು ಬಿಟ್ಟರೆ ಬಿಡಿಗಾಸು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಸಂತ್ರಸ್ತರ ಗಂಜಿ ಕೇಂದ್ರಗಳಲ್ಲಿ ಸರಿಯಾದ ಮೂಲಸೌಕರ್ಯ ಕಲ್ಪಿಸಲಾಗದೆ ರಾಜ್ಯ ಸರ್ಕಾರದ ಅಸಹಾಯಕತೆ ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ರು.

ಪ್ರವಾಹ ನಿರಾಶ್ರಿತರ ನೆರವಿಗೆ ಧಾವಿಸುವಲ್ಲಿ ಸರ್ಕಾರಗಳು ವಿಫಲ

ಬಿಜೆಪಿಯವರು ದೇಶದಲ್ಲಿ ವಿರೋಧ ಪಕ್ಷದವರೇ ಇಲ್ಲದ ಹಾಗೆ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ವಿಪಕ್ಷದ ಸಂಸದ, ಶಾಸಕರನ್ನು ಪದವಿ, ಹಣದ ಆಮಿಷುಗಳನ್ನು ಒಡ್ಡಿ ತಮ್ಮತ್ತ ಬರಮಾಡಿಕೊಳ್ಳುತ್ತಿದ್ದಾರೆ. ಇದನ್ನು ಒಪ್ಪದವರ ವಿರುದ್ಧ ಸುಳ್ಳು ಆರೋಪಗಳಡಿ ಕೇಸುಗಳನ್ನು ಹಾಕಿ ಜೈಲಿಗೆ ಹಾಕುತ್ತೇವೆಂದು ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಬೆಲೆ ನೀಡದೆ ಪೂರ್ವ ನಿಯೋಜನೆಯಂತೆ ಒಂದು ದೇಶ, ಒಂದು ಭಾಷೆ, ಒಂದೇ ಪಕ್ಷವೆಂಬಂತೆ ಯೋಜನೆ ರೂಪಿಸಿಕೊಳ್ಳಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡ ಮೇಲು ಮಾಡಲು ಹೊರಟಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Intro:ಸ್ಲಗ್ ಕೆಎ_ಬಿಡಿಆರ್_ಬಿಎಸ್‌ಕೆ_೨೩_೩
ಬಸವಕಲ್ಯಾಣದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೆಲ್ಪೆÃರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ ಹುಸೇನ್ ಮಾತನಾಡಿದರು.

ಪ್ರಕೃತಿ ವಿಕೋಪದಿಂದ ನಿರಾಶ್ರಿತರ ನೆರವಿಗೆ ಧಾವಿಸುವಲ್ಲಿ ಸರ್ಕಾರಗಳು ವಿಫಲ: ವೆಲ್ಫೆÃರ್ ಪಾರ್ಟಿ

ಬಸವಕಲ್ಯಾಣ: ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಸಾವಿರಾರು ಜನ ಮನೆ,ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಜನರ ನೆರವಿಗೆ ಧಾವಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವೆಲ್ಪೆÃರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ ಹುಸೇನ್ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನಿರಾಶ್ರಿತರಿಗೆ ಸೂರು ಕಲ್ಪಿಸುವ ಜೋತಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಬಡ ಜನರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಭಿತಿಯಿಂದ ಜನರು ತತ್ತರಿಸಿ ತಮ್ಮ ಮನೆ ಆಸ್ತಿಪಾಸ್ತಿ ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾಟಾಚಾರಕ್ಕಾಗಿ ಕೇಂದ್ರ ಸರ್ಕಾರದಿಂದ ವೈಮಾನಿಕ ಸಮಿಕ್ಷೆ ನಡೆಸಿದೆ. ಸಮಿಕ್ಷೆ ನಡೆಸಿ ತಿಂಗಳುಗಳೆ ಕಳೆದರು ಜನರಿಗೆ ಯಾವುದೆ ಪರಿಹಾರ ಕಲ್ಪಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಂತ್ವಾನದ ಮಾತುಗಳು ಬಿಟ್ಟರೆ ಬಿಡಿಗಾಸು ಸಿಕ್ಕಿಲ್ಲ ಎಂದು ಆರೋಪಿಸಿದರು.
ಸಂತ್ರಸ್ಥರ ಗಂಜಿಕೇಂದ್ರಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸಲಾಗದೆ ರಾಜ್ಯಾ ಸರ್ಕಾರದ ಅಸಹಾಯಕ ನೀತಿ ಪ್ರದರ್ಶಿಸುತ್ತಿದೆ. ಪರಿಹಾರ ನೀಡುವಲ್ಲಿ ಕೇಂದ್ರ ನಿರ್ಲಕ್ಷ್ಯ ಧೋರಣೆಯಿಂದ ಬೆಳಗಾವಿ ಜಿಲ್ಲೆಯ ಗಂಜಿ ಕೇಂದ್ರದಲ್ಲಿ ಬದುಕು ನಡೆಸುತ್ತಿರುವ ಬಡ ಕುಟುಂಬದ ನಾಲ್ಕು ವರ್ಷದ ಅಬ್ದುಲ್ ಸಾ ಎನ್ನುವ ಮಗು ನಿಧನ ಹೊಂದಿದೆ. ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ ಸಂತ್ರಸ್ಥರಿಗೆ ಅನುಕೂಲಕರ ಯೋಜನೆಗಳನ್ನು ರೂಪಿಸುವ ಬದಲು ಕೇಂದ್ರ ಸರ್ಕಾರ ಉಳ್ಳವರ ಪರವಾದ ಫಿಟ್ ಇಂಡಿಯಾದಂತಹ ಯೋಜನೆಗಳನ್ನು ಜಾರಿಗೆ ತರುತ್ತಿರುವದು ಖಂಡರ್ನಾಹವಾಗಿದೆ ಎಂದರು.

ಬಿಜೆಪಿಯವರು ದೇಶದಲ್ಲಿ ವಿರೋಧ ಪಕ್ಷದವರು ಇಲ್ಲದ ಹಾಗೆ ವಾತಾವರಣ ನಿರ್ಮಾಣ ಮಾಡುತಿದ್ದಾರೆ. ವಿಪಕ್ಷದ ಸಂಸದ, ಶಾಸಕರನ್ನು ಪದವಿ. ಹಣದ ಆಮಿಷುಗಳನ್ನು ಒಡ್ಡಿ ತಮ್ಮತ್ತ ಬರಮಾಡಿಕೊಳ್ಳುತಿದ್ದಾರೆ. ಇದನ್ನು ಒಪ್ಪದವರೆ ವಿರುದ್ಧ ಸುಳ್ಳು ಆರೋಪಗಳಡಿ ಕೇಸುಗಳನ್ನು ಹಾಕಿ ಜೈಲಿಗೆ ಹಾಕುತ್ತೇವೆಂದು ಹೆದರಿಸಿ ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಬೇಲೆ ನೀಡದೆ ಪೂರ್ವ ನಿಯೋಜನೆಯಂತೆ ಒಂದು ದೇಶ, ಒಂದು ಭಾಷೆ, ಒಂದೇ ಪಕ್ಷವೆಂಬಂತೆ ಯೋಜನೆ ರೂಪಿಸಿಕೊಳ್ಳಲು ಹೊರಟಿರುವ ಕೇಂದ್ರ ಬಿಜೆಪ ಸರ್ಕಾರದಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡ ಮೇಲು ಮಾಡಲು ಹೊರಟಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜಿ.ಎಸ್.ಟಿ ಮತ್ತು ಇನ್ನಿತರೆ ಸೇವಾ ಶುಲ್ಕಗಳು ಹೆಚ್ಚಳ ಮಾಡಿರುವದು. ಮುನ್ಸೂಚನೆ ಇಲ್ಲದೆ ನೊಟ್ ಬಂದಿ ಮಾಡುವ ಮೂಲಕ ಕೇಂದ್ರ ಸರ್ಕಾರ ಸಣ್ಣ ಅತಿ ಸಣ್ಣ ಕೈಗಾರಿಕೊದ್ಯಮಗಳನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. ಜಿ.ಡಿ.ಪಿ.ಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಆದರೆ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟಿಲವೆಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕ ಅವರು ಹೇಳಿಕೆ ನೀಡಿರುವದು ಹಾಸ್ಯಾಸ್ಪದವಾಗಿದೆ ಎಂದು ಟಿಕಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಮುಜಾಹಿದಪಾಶಾ ಖುರೇಷಿ ಮಾತನಾಡಿ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ನಗರದ ಮೂಲ ಸೌಕರ್ಯಗ ಅಭಿವೃದ್ಧಿಗೆ ಸರ್ಕಾರ ಆಧ್ಯತೆ ನೀಡಬೇಕು. ಐತಿ ಹಾಸಿಕ ಕೋಟೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಡಿಸಿಎಂ ಹೆಳಿಕೆಗೆ ಖಂಡನೆ

ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಮುಸ್ಲಿಮರ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವದು ನಿಲ್ಲಿಸಬೇಕು ಎಂದು ವೆಲ್ಪೆÃರ್ ಪಾಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ ಹುಸೇನ್ ಒತ್ತಾಯಿಸಿದರು.
ಕೋಮು ಸೌಹಾರ್ಧತೆಯಿಂದ ಕೂಡಿದ ಸಮಾಜದಲ್ಲಿ ನಾಗರಿಕರ ಮದ್ಯೆ ಬೇಧ, ಭಾವ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ಈಶ್ವರಪ್ಪ ನವರ ಹೇಳಿಕೆಗಳನ್ನು ಖಂಡಿಸಿತ್ತೆವೆ. ಒಂದು ಸಮುದಾಯದ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದ ಅವರು, ಕೆ.ಎಸ್. ಈಶ್ವರಪ್ಪ ನವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.