ETV Bharat / state

ಕೊರೊನಾ ಆತಂಕ... ಕಲಬುರಗಿ ಕಡೆ ತೆರಳುವ ಸಾರಿಗೆ ಬಸ್​​ಗಳು ಖಾಲಿ ಖಾಲಿ! - ಕೊರೊನಾ ಸೊಂಕು ಹರಡುವ ಭೀತಿಯಿಂದ ಪ್ರಯಾಣಿಕರು

ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ವೃದ್ಧರೊಬ್ಬರು ಸಾವನಪ್ಪಿರುವ ಹಿನ್ನಲೆ ನಗರದಿಂದ ಕಲಬುರಗಿಗೆ ತೆರಳುವ ಬಸ್ ಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದೆ.

KN_BDR_03_13_KARONA KALBURGI EFECT_7203280_AVBB
ಕೊರೊನಾ ಎಫೆಕ್ಟ್, ಕಲಬುರಗಿ ಕಡೆ ತೆರಳೋ ಸಾರಿಗೆ ಬಸ್​​ಗಳು ಖಾಲಿ ಖಾಲಿ...!
author img

By

Published : Mar 13, 2020, 5:09 PM IST

Updated : Mar 13, 2020, 6:54 PM IST

ಬೀದರ್: ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ವೃದ್ಧನೋರ್ವ ಬಲಿಯಾಗಿರುವ ಹಿನ್ನಲೆ ನಗರದಿಂದ ಕಲಬುರಗಿಗೆ ತೆರಳುವ ಬಸ್​ಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿವೆ.

ಕೊರೊನಾ ಆತಂಕ... ಕಲಬುರಗಿ ಕಡೆ ತೆರಳುವ ಸಾರಿಗೆ ಬಸ್​​ಗಳು ಖಾಲಿ ಖಾಲಿ!

ಪ್ರತಿ ದಿನ 70ಕ್ಕೂ ಅಧಿಕ ಬಸ್​ಗಳ ಓಡಾಟವಾಗ್ತಿದ್ದ ಬೀದರ್-ಕಲಬುರಗಿ ಮಧ್ಯ ಈಗ ಕೇವಲ 20 ಬಸ್​ಗಳು ಸಂಚರಿಸುತ್ತಿದ್ರೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ಕೊರೊನಾ ಸೋಂಕು ಹರಡುವ ಭೀತಿಯಿಂದ ಪ್ರಯಾಣಿಕರು ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಸ್​ನಲ್ಲಿ ಪ್ರಯಾಣಿಸುವಾಗ ಕೆಲವೊಂದಿಷ್ಟು ಜನರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪ್ರಯಾಣ ಮಾಡುತ್ತಿದ್ದು, ಸೋಂಕಿನ ಭೀತಿಯೂ ಇದೆ ಅಂತಿದ್ದಾರೆ.

ಪ್ರತಿ ವರ್ಷ ಕಲಬುರಗಿಯಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ದಿನಗಳಲ್ಲಿ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್​ಗಳ ಓಡಾಟ ಹೆಚ್ಚಾಗಿರುತ್ತಿತ್ತು. ಪ್ರಯಾಣಿಕರು ಕೂಡ ಹೆಚ್ಚಾಗಿ ಇರ್ತಾ ಇದ್ದರು. ಆದ್ರೆ ಈಗ ಕೊರೊನಾ ವೈರಸ್​ನಿಂದ ಓರ್ವ ಸಾವನ್ನಪ್ಪಿದ್ದಕ್ಕೆ ಈ ಪರಿಸ್ಥಿತಿ ಎದುರಾಗಿದೆ ಎಂದು ಕಂಡಕ್ಟರ್​ವೋರ್ವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Last Updated : Mar 13, 2020, 6:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.