ETV Bharat / state

ಹಿಂದಿ ಹೇರಿಕೆ ಸಲ್ಲದು, ಕನ್ನಡ ರಾಷ್ಟ್ರೀಯ ಭಾಷೆ ಎಂದು ಘೋಷಿಸಿ : ಕರವೇ ಒತ್ತಾಯ - Basavakalyana in Bidar

ಸಂವಿಧಾನದಲ್ಲಿ ಹಿಂದಿ ಭಾಷೆಗೆ ರಾಷ್ಟ್ರೀಯ ಭಾಷೆ ಎಂದು ಎಲ್ಲಿಯೂ ಮಾನ್ಯತೆ ನೀಡಿಲ್ಲ. ಆದರೂ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆಗೆ ನಿರಂತರ ಪ್ರಯತ್ನಿಸುತ್ತಿದೆ..

Force full Hindi imposition is unacceptable: Karnataka Rakshana vedike
ಹಿಂದಿ ಹೇರಿಕೆ ಸಲ್ಲದು,, ಕನ್ನಡ ಭಾಷೆಯನ್ನೂ ರಾಷ್ಟ್ರೀಯ ಭಾಷೆ ಎಂದು ಘೋಷಿಸಿ: ಕರವೇ ಒತ್ತಾಯ
author img

By

Published : Sep 14, 2020, 4:48 PM IST

ಬಸವಕಲ್ಯಾಣ(ಬೀದರ್​): ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡದೆ ಕನ್ನಡಕ್ಕೂ ರಾಷ್ಟ್ರ ಭಾಷೆಯ ಸ್ಥಾನ ಮಾನ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಹಿಂದಿ ಹೇರಿಕೆ ಸಲ್ಲದು, ಕನ್ನಡಕ್ಕೂ ರಾಷ್ಟ್ರೀಯ ಭಾಷೆ ಎಂದು ಘೋಷಿಸಿ : ಕರವೇ ಒತ್ತಾಯ

ಇಲ್ಲಿನ ಮಿನಿ ವಿಧಾನಸೌಧಕ್ಕೆ ತೆರಳಿದ ಕರವೇ ಪದಾಧಿಕಾರಿಗಳ ನಿಯೋಗ ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಬರೆದು ಅದನ್ನು ತಹಶೀಲ್ದಾರ್‌ರಾದ ಸಾವಿತ್ರಿ ಸಲಗರ್ ಅವರಿಗೆ ಸಲ್ಲಿಸಿದೆ.

ಸಂವಿಧಾನದಲ್ಲಿ ಹಿಂದಿ ಭಾಷೆಗೆ ರಾಷ್ಟ್ರೀಯ ಭಾಷೆ ಎಂದು ಎಲ್ಲಿಯೂ ಮಾನ್ಯತೆ ನೀಡಿಲ್ಲ. ಆದರೂ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆಗೆ ನಿರಂತರ ಪ್ರಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಅಲ್ಲಿಯ ಸ್ಥಳೀಯ ಭಾಷೆಗಳನ್ನು ರಾಷ್ಟ್ರೀಯ ಭಾಷೆ ಎಂದು ಘೋಷಣೆ ಮಾಡಲಾಗಿದೆ. ಅದೇ ಮಾದರಿ ನಮ್ಮ ಕನ್ನಡ ಭಾಷೆಯನ್ನೂ ಕೂಡ ರಾಷ್ಟ್ರೀಯ ಭಾಷೆ ಎಂದು ಘೋಷಣೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.