ETV Bharat / state

ಬಡ ಜನರಿಗೆ ದಿನಸಿ ಕಿಟ್​ ವಿತರಿಸಿದ ಕಾಂಗ್ರೆಸ್​ ಶಾಸಕ - Food kit distribution by mla B.narayanrao

ಬೀದರ್​ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗ್ರಾಮಗಳ ಬಡ - ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್​ಗಳನ್ನು ಶಾಸಕ ಬಿ.ನಾರಾಯಣರಾವ್ ವಿತರಿಸಿದರು.

Food kit distribution by mla B.narayanrao
ಶಾಸಕ ಬಿ.ನಾರಾಯಣರಾವ್
author img

By

Published : Apr 30, 2020, 9:40 PM IST

ಬಸವಕಲ್ಯಾಣ: ಲಾಕ್​ಡೌನ್​ ಹಿನ್ನೆಲೆ ಉದ್ಯೋಗವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡವರ, ಕೂಲಿ ಕಾರ್ಮಿಕರ ನೆರವಿಗೆ ಶಾಸಕ ಬಿ.ನಾರಾಯಣರಾವ ಸಹಾಯಹಸ್ತ ಚಾಚಿದ್ದಾರೆ.

ಶಾಸಕ ಬಿ.ನಾರಾಯಣರಾವ್

ನಗರದಲ್ಲಿ ಈಗಾಗಲೇ ಬಡ ಕುಟುಂಬಗಳಿಗೆ ವೈಯಕ್ತಿಕ ಖರ್ಚಿನಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಿರುವ ಶಾಸಕರು ತಾಲೂಕಿನ ಎಲ್ಲ ಹಳ್ಳಿಗಳ ಬಡ ಕುಟುಂಬಗಳಿಗೆ ಆಹಾರ ವಿತರಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ್ದಾರೆ.

ನಗರದ 1ರಿಂದ 31 ವಾರ್ಡ್​ಗಳ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 4 ಸಾವಿರಕ್ಕೂ ಹೆಚ್ಚು ಬಡ ಕುಟುಂಬಳಿಗೆ ದಿನಸಿ ಕಿಟ್​ಗಳನ್ನು ವಿತರಿಸಿದ್ದಾರೆ. ತಾಲೂಕಿನ ಹಳ್ಳಿಗಳಿಗೆ ವಾಹನಗಳ ಮೂಲಕ ದಿನಸಿ ಕಿಟ್​ಗಳನ್ನು ರವಾನಿಸಲಾಗುತ್ತಿದೆ.

ಗ್ರಾಮೀಣ ಪ್ರದೇಶದ 15 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ನಾರಾಯಣರಾವ್ ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.