ETV Bharat / state

ಚಲಿಸುತ್ತಿದ್ದ ಟ್ರ್ಯಾಕ್ಟರ್​ನಲ್ಲಿ ಆಕಸ್ಮಿಕ ಅಗ್ನಿ ಅವಘಡ; ಹೊತ್ತಿ ಉರಿದ ಮೇವು...! - ಬೀದರ್ ಸುದ್ದಿ

ಬೀದರ್​ನ ಕಮಲನಗರ ತಾಲೂಕಿನ ಸೋಮಾ ನಾಯಕ ತಾಂಡಾದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್​ನಲ್ಲಿದ್ದ ಮೇವು ನೋಡು ನೋಡುತ್ತಲೇ ಹೊತ್ತಿ ಉರಿದು ಭಸ್ಮವಾದ ಘಟನೆ ನಡೆದಿದೆ.

fire-accident-in-a-moving-tractor-at-bidar

author img

By

Published : Feb 21, 2020, 10:39 PM IST

ಬೀದರ್: ಚಲಿಸುತ್ತಿದ್ದ ಟ್ರ್ಯಾಕ್ಟರ್​​ ಮೇಲೆ ವಿದ್ಯುತ್ ತಂತಿ ತಗುಲಿ ಅಗ್ನಿ ಅವಘಡ ಸಂಭವಿಸಿದೆ. ಈ ಮಧ್ಯೆ ಚಾಲಕನ ಚಾಣಾಕ್ಷ್ಯತನದಿಂದ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದ್ದು ಟ್ರ್ಯಾಕ್ಟರ್​​ನಲ್ಲಿದ್ದ ಮೇವು ನೋಡ ನೋಡುತ್ತಲೇ ಉರಿದು ಭಸ್ಮವಾದ ಘಟನೆ ನಡೆದಿದೆ.

ಚಲಿಸುತ್ತಿದ್ದ ಟ್ರ್ಯಾಕ್ಟರ್​​ನಲ್ಲಿ ಆಕಸ್ಮಿಕ ಅಗ್ನಿ ಅವಘಡ

ಜಿಲ್ಲೆಯ ಕಮಲನಗರ ತಾಲೂಕಿನ ಸೋಮಾ ನಾಯಕ ತಾಂಡಾದಲ್ಲಿ ಈ ಅಗ್ನಿ ಅವಘಡ ನಡೆದಿದೆ. ಬನಸಿ ಜಾಧವ ಎಂಬುವವರು ಜಾನುವಾರುಗಳಿಗೆ ಜೋಳದ ಮೇವನ್ನ ಟ್ರ್ಯಾಕ್ಟರ್​ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ, ಟ್ರ್ಯಾಲಿಯ ಮೇಲೆ ವಿದ್ಯುತ್ ತಂತಿ ಬಿದ್ದು ಬೆಂಕಿ ಕಾಣಿಸಿಕೊಂಡಿದೆ‌. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಟ್ರ್ಯಾಕ್ಟರ್​ ಇಂಜಿನ್​ನಿಂದ ಟ್ರ್ಯಾಲಿ ಬೇರ್ಪಡಿಸಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರಾದರೂ ಮೇವು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.