ETV Bharat / state

ಕ್ವಾರಂಟೈನ್​​ನಲ್ಲಿರುವವರ ಪರೀಕ್ಷೆ ಬೇಗ ಮುಗಿಸಿ: ಶಾಸಕ ನಾರಾಯಣರಾವ್​​ ಸೂಚನೆ

ಕ್ವಾರಂಟೈನ್​​ನಲ್ಲಿರುವ ಜನರ ರಕ್ತ ಹಾಗೂ ಗಂಟಲು ದ್ರವದ ಮಾದರಿ ತಪಾಸಣೆ ಕಾರ್ಯವನ್ನು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ನಾರಾಯಣರಾವ್​ ಸೂಚಿಸಿದರು.

basavakalyana
ಬಸವಕಲ್ಯಾಣ
author img

By

Published : May 27, 2020, 3:47 PM IST

ಬಸವಕಲ್ಯಾಣ: ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿ ಕ್ವಾರಂಟೈನ್​​ನಲ್ಲಿರುವ ಜನರ ರಕ್ತ ಹಾಗೂ ಗಂಟಲು ದ್ರವದ ಮಾದರಿ ತಪಾಸಣೆ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ನಾರಾಯಣರಾವ್​ ಸೂಚಿಸಿದರು.

ತಾಲೂಕಿನ ಕೋಹಿನೂರ ಗ್ರಾಮದಲ್ಲಿ ಒಂದೇ ದಿನ 10 ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಶಾಸಕರು, ಕ್ವಾರಂಟೈನ್​​ನಲ್ಲಿರುವ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ತಪಾಸಣೆ ಬೇಗ ಮುಗಿಸಲು ಅಧಿಕಾರಿಗಳಿಗೆ ಶಾಸಕ ಬಿ.ನಾರಾಯಣರಾವ್​ ಸೂಚನೆ

ತಾಲೂಕಿನಲ್ಲಿ ಸುಮಾರು 7 ಸಾವಿರದಷ್ಟು ಜನ ಅನ್ಯ ರಾಜ್ಯಗಳಿಂದ ಆಗಮಿಸಿ ಆಯಾ ಗ್ರಾಮಗಳಲ್ಲಿ ಆರಂಭಿಸಲಾದ ಕ್ವಾರಂಟೈನ್ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಊಟ, ಶುದ್ಧ ನೀರು ಪೂರೈಸುವ ಜೊತೆಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ವಿದ್ಯುತ್, ಶೌಚಾಲಯ ಸೇರಿದಂತೆ ಇತರ ಎಲ್ಲಾ ತರಹದ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.

ಕಂಟೇನ್ಮೆಂಟ್ ಏರಿಯಾಗಳಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ತಹಶೀಲ್ದಾರ, ಇಒ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಆಯುಕ್ತರಾದ ಭಂವರಸಿಂಗ್ ಮೀನಾ ಮಾತನಾಡಿ, ಕೊರೊನಾ ಸೋಂಕು ಪತ್ತೆಯಾದ ಕೋಹಿನೂರ ಗ್ರಾಮದಲ್ಲಿ ಅನಗತ್ಯ ಜನ ಸಂಚಾರಕ್ಕೆ ಕಡಿವಾಣ ಹಾಕಬೇಕು. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಎಲ್ಲಾ ರಸ್ತೆಗಳನ್ನು ಸೀಲ್​ ಡೌನ್ ಮಾಡಬೇಕು. ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.