ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಸೋಮಾನಾಯಕ್ ತಾಂಡಾ ನಿವಾಸಿ ಮಾರುತಿ ಎಂಬ ರೈತ ಕಷ್ಟಪಟ್ಟು ಮೆಣಸಿನಕಾಯಿ ಬಂಪರ್ ಬೆಳೆ ತೆಗೆದಿದ್ದರು. ಇಳುವರಿ ಏನೋ ಬಂದಿದೆ. ಸಿಕ್ಕಾಪಟ್ಟೆ ಏನೋ ಬೆಳೆ ಬಂದಿದೆ. ಆದ್ರೆ, ಮಾರುಕಟ್ಟೆಯಲ್ಲಿ ಬೆಲೆಯೆ ಇಲ್ಲದಕ್ಕೆ ಫಲವತ್ತಾಗಿ ಬೆಳೆದ ಬೆಳೆಯನ್ನು ಕವಡೆ ಕಾಸಿಗೆ ಹರಾಜು ಹಾಕುವಂಥ ಸ್ಥಿತಿ ರೈತನದ್ದಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಹಸಿ ಮೆಣಸಿನಕಾಯಿಗೆ 1800 ರಿಂದ 2000 ವರೆಗೆ ಬೆಲೆ ಸಿಗ್ತಿದೆ. ಇದರಿಂದ ಒಂದು ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಮೂಲಕ ಬೇಸಿಗೆ ಕಾಲದಲ್ಲಿ ನೀರಿಲ್ಲದಿದ್ದರೂ ಟ್ಯಾಂಕರ್ ಮೂಲಕ ನೀರುಣಿಸಿ ಮೆಣಸಿನಕಾಯಿ ಗಿಡಗಳ ಆರೈಕೆ ಮಾಡಿರುವ ರೈತ ಮಾರುತಿ ಈಗ ಒಂದು ಎಕರೆಗೆ 30 ರಿಂದ 40 ಕ್ವಿಂಟಾಲ್ ಮೆಣಸಿನಕಾಯಿ ಬೆಳೆದಿದ್ದಾರೆ. ಆದ್ರೆ ಮಾರುಕಟ್ಟೆಯಲ್ಲಿ ಮಾರಲು ಹೋದ್ರೆ ಬೆಲೆ ಸಿಗ್ತಿಲ್ಲ. ಹೀಗಾಗಿ ಖರ್ಚು ಮಾಡಿದ ಹಣ ಕೂಡ ಸಿಗುತ್ತಿಲ್ಲ.
ಒಟ್ಟಿನಲ್ಲಿ ಬರಗಾಲದ ಬರೆಯಿಂದ ಅನ್ನದಾತರು ಕಷ್ಟದಲ್ಲಿರುವಾಗ ಸರಿಯಾದ ಮಾರುಕಟ್ಟೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.