ETV Bharat / state

ಕೈಮುಗಿದು ಕೇಳುತ್ತೇನೆ, ಲಾಕ್‌ಡೌನ್​ಗೆ ಪ್ರತಿಯೊಬ್ಬರು ಸಹಕರಿಸಿ.. ಶಾಸಕ ಬಿ.ನಾರಾಯಣರಾವ್

ಪ್ರತಿಯೊಬ್ಬ ನಾಗರಿಕನೂ ತನ್ನ ಜವಾಬ್ದಾರಿಯಿಂದ, ಜಾಗೃತಿಯಿಂದ ಶಿಸ್ತಿನ ಸಿಪಾಯಿಯಾಗಿ 21 ದಿವಸ ಮನೆಯಿಂದ ಹೊರಗಡೆ ಬಾರದೆ ಲಾಕ್‌ಡೌನ್ ಆದೇಶ ಪರಿಪಾಲನೆ ಮಾಡಬೇಕಿದೆ.

MLA B Narayana Rao
ಶಾಸಕ ಬಿ.ನಾರಾಯಣರಾವ್
author img

By

Published : Mar 25, 2020, 8:00 AM IST

ಬಸವಕಲ್ಯಾಣ : ಕೊರೊನಾ ರೋಗದಿಂದ ಮುಕ್ತರಾಗಬೇಕಾದರೆ ಪ್ರತಿಯೊಬ್ಬರೂ ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಶಾಸಕ ನಾರಾಯಣರಾವ್​ ಮನವಿ ಮಾಡಿಕೊಂಡಿದ್ದಾರೆ.

ಯಾರೂ ಹೊರಗೆ ಬರಬೇಡಿ ಅಂತಾ ಮನವಿ ಮಾಡಿದ ಶಾಸಕರು..

ಕೊರೊನಾ ರೋಗದಿಂದ ಮುಕ್ತರಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಉಳಿದುಕೊಂಡು ಸರ್ಕಾರಕ್ಕೆ ಸಹಕರಿಸಬೇಕು ಎಂದು ತಮ್ಮೆಲ್ಲರಿಗೂ ನಾನು ಕೈಜೋಡಿಸಿ ಮನವಿ ಮಾಡಿಕೊಳ್ಳುವೆ ಎಂದಿದ್ದಾರೆ ಶಾಸಕರು.

ಕೊರೊನಾ ಕಾಯಿಲೆಯಿಂದ ಮುಕ್ತರಾಗಬೇಕಾದರೆ ಕೇವಲ ಸರ್ಕಾರದಿಂದ ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕನೂ ತನ್ನ ಜವಾಬ್ದಾರಿಯಿಂದ, ಜಾಗೃತಿಯಿಂದ ಶಿಸ್ತಿನ ಸಿಪಾಯಿಯಾಗಿ 21 ದಿವಸ ಮನೆಯಿಂದ ಹೊರಗಡೆ ಬಾರದೆ ಲಾಕ್‌ಡೌನ್ ಆದೇಶ ಪರಿಪಾಲನೆ ಮಾಡಬೇಕು. ಈ ದೇಶದಿಂದ ಕೊರೊನಾ ಹೊಡೆದೋಡಿಸಬೇಕು ಎನ್ನುವ ನಿಟ್ಟಿನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಶಾಸಕ ನಾರಾಯಣರಾವ್‌ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.