ಬೀದರ್: ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೀದರ್-ಕಲಬುರಗಿ ರಸ್ತೆ ಕಾಮಗಾರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಕುರಿತು 'ಈಟಿವಿ ಭಾರತ್'ನಲ್ಲಿ ವಿಸ್ತೃತವಾದ ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸಂಬಂಧಪಟ್ಟ ಗುತ್ತಿಗೆದಾರನ ಮೈಚಳಿ ಬಿಡಿಸಿದ್ದಾರೆ.
ಇದನ್ನೂ ಓದಿ...ಧೂಳು..ಧೂಳು..ಧೂಳು...ಇದು ಶಾಲಾ ಮಕ್ಕಳ ಗೋಳು
ಬೀದರ್ ತಾಲೂಕಿನ ಅಣದೂರು ಗ್ರಾಮದ ಬಳಿ ರಾಜ್ಯ ಹೆದ್ದಾರಿ ಬೀದರ್-ಕಲಬುರಗಿ ರಸ್ತೆ ಕಾಮಗಾರಿ ಅರ್ಧಕ್ಕೆ ಬಿಟ್ಟಿದ್ದ ಕಾರಣ ಇಲ್ಲಿನ ಗ್ರಾಮಸ್ಥರು, ಶಾಲಾ ಮಕ್ಕಳು ಧೂಳಿನಿಂದ ಕಂಗೆಟ್ಟು ಹೋಗಿದ್ದರು. ಇದಕ್ಕೆಲ್ಲ ಗುತ್ತಿಗೆದಾರನ ಅಸಡ್ಡೆತನವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.
ಸುಮಾರು ಅರ್ಧ ಕಿಲೋ ಮೀಟರ್ ಉದ್ದದ ರಸ್ತೆಗೆ ಗುತ್ತಿಗೆದಾರ ಡಾಂಬರ್ ಹಾಕಿಸಿ ನೆನೆಗುದಿಗೆ ಬಿದಿದ್ದ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ತಲೆನೋವಾಗಿ ಪರಿಣಮಿಸಿದ್ದ ಸಮಸ್ಯೆಯೊಂದಕ್ಕೆ 'ಈಟಿವಿ ಭಾರತ' ವರದಿ ಮುಕ್ತಿ ನೀಡಿದ್ದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.