ETV Bharat / state

ಬ್ರಿಮ್ಸ್ ಆಸ್ಪತ್ರೆ ದುರಾವಸ್ಥೆ ಸರಿಪಡಿಸಲು ಅಗತ್ಯ ಕ್ರಮ, ಸಚಿವ ಡಾ.ಕೆ.ಸುಧಾಕರ್ - ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್

ನಗರದ ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬ್ರೀಮ್ಸ್ ದುರಾವಸ್ಥೆಯನ್ನು ಕಂಡು ಕೆಂಡಾ ಮಂಡಲರಾದರು. ನಮಗೆ ಸಾಕಾಗಿ ಹೋಗಿದೆ ಈ ಆಸ್ಪತ್ರೆಯ ಅವ್ಯವಸ್ಥೆ ನೋಡಿ ನೋಡಿ ಎಂದು ಸಭೆಯಲ್ಲಿದ್ದ ಎಲ್ಲ ಶಾಸಕರು ಇದೆ ವೇಳೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.

dr-k-sudhakar-minister-of-steps-to-remedy-brims-hospital
ಬ್ರಿಮ್ಸ್ ಆಸ್ಪತ್ರೆ ದುರಾವಸ್ಥೆ ಸರಿಪಡಿಸಲು ಅಗತ್ಯ ಕ್ರಮ, ಸಚಿವ ಡಾ.ಕೆ.ಸುಧಾಕರ್
author img

By

Published : Jun 14, 2020, 10:35 PM IST

Updated : Jun 14, 2020, 11:20 PM IST

ಬೀದರ್: ಹಲವು ಕೊರತೆಗಳಿಂದ ದುರಾವಸ್ಥೆ ಆಗರವಾಗಿರುವ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯ ಸುಧಾರಣೆಯ ಬಗ್ಗೆ ಬೆಂಗೂಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಚರ್ಚಿಸಿ, ಇಲ್ಲಿನ ಅವ್ಯವಸ್ಥೆಗೆ ಲಗಾಮು ಹಾಕುವುದಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಹೇಳಿದರು.

ಬ್ರಿಮ್ಸ್ ಆಸ್ಪತ್ರೆ ದುರಾವಸ್ಥೆ ಸರಿಪಡಿಸಲು ಅಗತ್ಯ ಕ್ರಮ, ಸಚಿವ ಡಾ.ಕೆ.ಸುಧಾಕರ್

ನಗರದ ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬ್ರೀಮ್ಸ್ ದುರಾವಸ್ಥೆಯನ್ನು ಕಂಡು ಕೆಂಡಾ ಮಂಡಲರಾದರು. ನಮಗೆ ಸಾಕಾಗಿ ಹೋಗಿದೆ ಈ ಆಸ್ಪತ್ರೆಯ ಅವ್ಯವಸ್ಥೆ ನೋಡಿ ನೋಡಿ ಎಂದು ಸಭೆಯಲ್ಲಿದ್ದ ಎಲ್ಲ ಶಾಸಕರು ಇದೆ ವೇಳೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಬ್ರಿಮ್ಸ್ ನಲ್ಲಿ 71 ಗ್ರೂಪ್ ಎ, 1 ಗ್ರೂಪ್ಬಿ, 135 ಗ್ರೂಪ್ ಸಿ, 82 ಗ್ರೂಪ್ಡಿ ಸೇರಿ 289 ಹುದ್ದೆಗಳು ಹಾಗೂ ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಗ್ರೂಪ್ ಎ 12, ಗ್ರೂಪ್ಬಿ 2, ಗ್ರೂಪ್ ಸಿ 71 ಮತ್ತುಗ್ರೂಪ್ ಡಿ 15 ಸೇರಿ 100 ಹುದ್ದೆಗಳು ಸೇರಿ ಒಟ್ಟು 389 ಹುದ್ದೆಗಳು ಭರ್ತಿಯಾಗುವುದು ಬಾಕಿ ಇದೆ. ಬ್ರಿಮ್ಸ್ ನಲ್ಲಿ ಇದುವರೆಗೆ ಖಾಲಿ ಇರುವ 5 ಪ್ರೊಪೆಸರ್, 3 ಅಸೋಸಿಯೇಟ್ ಪ್ರೊಪೆಸರ್ ಮತ್ತು 8 ಅಸಿಸ್ಟಂಟ್ ಪ್ರೊಪೇಸರ್ ಹುದ್ದೆಗಳ ನೇಮಕಾತಿ ನಡೆಯುವ ಪ್ರಕ್ರಿಯೆ ಶೀಘ್ರ ಆರಂಭವಾಗಬೇಕು ಎಂದು ಸಚಿವ ಸುಧಾಕರ್ ಇದೆ ವೇಳೆ ನಿರ್ದೇಶನ ನೀಡಿದರು.

13 ವರ್ಷದ ಈ ಕಾಲೇಜಿಗೆ ಇದುವರೆಗೆ ಆಡಾಳಿತಾಧಿಕಾರಿ ಇಲ್ಲವೆಂದರೆ ಹೇಗೆ? ಒಟ್ಟು ಮಂಜೂರಾದ 1085 ಹುದ್ದೆಗಳ ಪೈಕಿ ಇದುವರೆಗೆ 389 ಹುದ್ದೆಗಳು ಭರ್ತಿಯೇ ಆಗಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದ ಸಚಿವರು, ಈ ಆಸ್ಪತ್ರೆಯಿಂದ ಜನರಿಗೆ ಅನುಕೂಲವಾಗುತ್ತಿಲ್ಲ. ನೂರಾರು ಕೋಟಿ ಹಣವ್ಯಯಿಸಿ ನಿರ್ಮಿಸಿದ ಆಸ್ಪತ್ರೆಯು ಯಾವ ಪುರುಷಾರ್ಥಕ್ಕೆ ಇರಬೇಕು ಎಂದು ಸಚಿವ ಡಾ.ಸುಧಾಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದೆ ವೇಳೆ ಸಂಸದರಾದ ಭಗವಂತ ಖೂಬಾ ಅವರು ಮಾತನಾಡಿ, ಹಲವಾರು ಭಾರಿ ಆಸ್ಪತ್ರೆಗೆ ಭೇಟಿ ನೀಡಿ, ಸಭೆ ನಡೆಸಿ ತಿಳಿಸಿದ್ದರೂ ಇದುವರೆಗೆ ಸುಧಾರಣೆಯಾಗುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿ ಅಸಮಾಧಾನ ತೋರಿದರು. ಆಸ್ಪತ್ರೆಗೆ ನೂರಾರು ಕೋಟಿ ರೂ ಖರ್ಚು ಮಾಡಿದ್ದರೂ ಜನತೆಗೆ ಇಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಸೊಲ್ಲಾಪುರ, ಹೈದ್ರಾಬಾದ್ ಹೋಗುವಂತಾಗಿದೆ. ಬಹಳಷ್ಟು ವರ್ಷಗಳಿಂದ ಇಲ್ಲಿವರೆಗೆಬ್ರಿಮ್ಸ್ ಸುಧಾರಣೆ ವಿಷಯವು ಹತ್ತಾರು ವರ್ಷಗಳ ಕಾಲ ಮೀಟಿಂಗ್ ಗೆ ಮಾತ್ರ ಸೀಮಿತ ಆಗುತ್ತಿದೆ. ಇಲ್ಲಿನ ಸಮಸ್ಯೆ ನಿಮ್ಮಿಂದಾದರೂ ತೊಲಗಲಿ ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಸಂಸದ ಭಗವಂತ ಖೂಬಾ, ಡಾ.ಉಮೇಶ್ ಜಾಧವ್, ಶಾಸಕರಾದ ರಹಿಂಖಾನ್, ರಾಜಶೇಖರ್ ಪಾಟೀಲ್, ಬಿ.ನಾರಾಯಣರಾವ್, ಜಿಪಂ ಅಧ್ಯಕ್ಷರಾದ ಗೀತಾ ಚಿದ್ರಿ, ಜಿಲ್ಲಾಧಿಕಾರಿ ರಾಮಚಂದ್ರನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Last Updated : Jun 14, 2020, 11:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.