ಬೀದರ್: ಸುಡು ಬಿಸಿಲಿನ ತಾಪಕ್ಕೆ ಬೆಂದು ಹೋದ ಜಿಲ್ಲೆಯ ಜನರು ಹನಿ ನೀರಿಗಾಗಿ ಹರಸಾಹಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಗಣಿ, ಭೂ ವಿಜ್ಞಾನ ಮತ್ತು ಮುಜುರಾಯಿ ಸಚಿವ ರಾಜಶೇಖರ್ ಪಾಟೀಲ್ ಅವರ ಜಿಲ್ಲೆಯಲ್ಲಿಯೇ ಇಲಾಖೆ ಸಿಬ್ಬಂದಿ ಕೊರತೆಯಿದ್ದು ಜನರು ಹನಿ ನೀರಿಗೆ ಪರದಾಡುವಂತಾಗಿದೆ. ಸರ್ಕಾರ ಕೊಳವೆಬಾವಿ ಕೊರೆದು ಸಮಸ್ಯೆ ಇರುವ ಭಾಗದ ಜನರಿಗೆ ನೀರುಣಿಸಲು ಅನುದಾನ ಕೂಡ ಮೀಸಲಿಟ್ಟಿದೆ. ಆದರೆ ಜಲ ಮೂಲ ಪತ್ತೆ ಹಚ್ಚುವ ಅಧಿಕಾರಿ ಇಲ್ಲದಕ್ಕೆ ನೀರು ಸರಬರಾಜು ಇಲಾಖೆ ಕೊಳವೆ ಬಾವಿ ಕೊರೆಸುವದಕ್ಕೆ ಸಾಧ್ಯವಿಲ್ಲ ಇದು ಸರ್ಕಾರದ ನಿಯಮ ಎಂಬ ಸಬೂತು ಹೇಳುತ್ತಿದ್ದಾರಂತೆ.
ಜಿಲ್ಲೆಯಲ್ಲಿ ಜಿಯೊಲೊಜಿಸ್ಟ್ ಸಿಬ್ಬಂದಿ ಇಲ್ಲ. ಗುತ್ತಿಗೆ ಆಧಾರದಲ್ಲಿ ಕಲ್ಬುರ್ಗಿ ಹಾಗೂ ಬೀದರ್ ಜಿಲ್ಲೆಗೆ ಒಬ್ಬ ಅಧಿಕಾರಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನೀರಿನ ಸಮಸ್ಯೆ ಉಲ್ಬಣಗೊಂಡ ಭಾಗದಲ್ಲಿ ತಕ್ಷಣಕ್ಕೆ ಬೋರ್ ವೆಲ್ ಕೊರೆಯಲಿಕ್ಕಾಗ್ತಿಲ್ಲ, ತಾಂತ್ರಿಕ ಅಡಚಣೆ ಇರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ, ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬಿಳಗಿ ಅಸಹಾಯಕತೆ ತೊಡಿಕೊಂಡಿದ್ದಾರೆ.
ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಭಾಗಗಳಿಗೆ 158 ಖಾಸಗಿ ಬೋರ್ ವೇಲ್ ಗಳನ್ನ ಬಾಡಿಗೆ ತೆಗೆದುಕೊಂಡು ಜನರಿಗೆ ಕುಡಿಯಲು ನೀರು ಒದಗಿಸಲಾಗ್ತಿದೆ, ಎಂದು ಹೇಳಿದ್ದಾರೆ.