ETV Bharat / state

ಉದ್ಧಾರ ಮಾಡದ ಉದ್ದು, ಬಗರಿ ಮೂಳೆ ಮುರಿದ ತೊಗರಿ.. ಅನ್ನದಾತರಿಗೆ ಸೋಲುಣಿಸಿದ ಸೋಯಾಬಿನ್​ - ಬೀದರ್​ ಸೋಯಾಬಿನ್ ಬೆಳೆ ನಾಶ ಸುದ್ದಿ

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ದಾಬಕಾ, ಹಂಗರಗಾ, ಮುರ್ಕಿ, ಎಕಂಬಾ ಸೇರಿದಂತೆ ಬಹುತೇಕ ಕಡೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಫಲವತ್ತಾಗಿ ಬೆಳೆದ  ಸೋಯಾಬಿನ್  ನೀರುಪಾಲಾಗಿದೆ.

ಬೀದರ್​ನಲ್ಲಿ ನೀರುಪಾಲಾದ ಸೋಯಾಬಿನ್ :ಕಂಗಾಲಾದ ಅನ್ನದಾತ
author img

By

Published : Oct 31, 2019, 12:44 PM IST

ಬೀದರ್: ಸಕಾಲಕ್ಕೆ ಮಳೆಯಾಗದೆ ಮುಂಗಾರು ಹಂಗಾಮಿನ ಉದ್ದು, ಹೆಸರು, ಜೋಳ ನಾಶವಾಗಿ ಕಂಗ್ಗೆಟ್ಟು ಹೋದ ರೈತರ ಪಾಲಿನ ಆಶಾಕಿರಣವಾಗಿದ್ದ ಸೋಯಾಬಿನ್ ಬೆಳೆ ಈಗ ಸತತ ಮಳೆಯಿಂದಾಗಿ ನೀರುಪಾಲಾಗಿ ಅನ್ನದಾತ ಅಕ್ಷರಶಃ ಕಂಗಾಲಾಗಿದ್ದಾನೆ.

ಬೀದರ್​ನಲ್ಲಿ ನೀರುಪಾಲಾದ ಸೋಯಾಬಿನ್ :ಕಂಗಾಲಾದ ಅನ್ನದಾತ

ಜಿಲ್ಲೆಯ ಔರಾದ್ ತಾಲೂಕಿನ ದಾಬಕಾ, ಹಂಗರಗಾ, ಮುರ್ಕಿ, ಎಕಂಬಾ ಸೇರಿದಂತೆ ಬಹುತೇಕ ಕಡೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಫಲವತ್ತಾಗಿ ಬೆಳೆದ ಸೋಯಾಬಿನ್ ನೀರುಪಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅನ್ನದಾತ ಕಂಗಾಲಾಗಿದ್ದಾನೆ. ಗದ್ದೆಯಲ್ಲಿ ನೀರು ತುಂಬಿಕೊಂಡಿರುವ ಸೋಯಾಬಿನ್​ ಬೆಳೆಯನ್ನು ಹೆಂಗಾದ್ರು ಮಾಡಿ ತೆಗಿಯಬೇಕು ಅಂದ್ರು ಆಗದೆ ರೈತ ಕೈಚೆಲ್ಲಿ ಕುಂತಿದ್ದಾನೆ.

ಈ ಬಾರಿ ಮುಂಗಾರು ಹಂಗಾಮಿನ ವೇಳೆಯಲ್ಲಿ ಸಕಾಲಕ್ಕೆ ಮಳೆಯಾಗದೆ ವಾಣಿಜ್ಯ ಬೆಳೆಗಳಾದ ಉದ್ದು, ಹೆಸರು ಹಾಗೆ ಜೋಳ, ತೊಗರಿ ನಾಶವಾಗಿದೆ. ಕಡಿಮೆ ಮಳೆಯಾದ್ರು ಬೆಳೆದಿದ್ದ ಸೋಯಾಬಿನ್ ಇನ್ನೆನು ಕಟಾವು ಮಾಡಿ ರಾಶಿ ಮಾಡಬೇಕು ಅನ್ನುವಷ್ಟರಲ್ಲಿ ಮಳೆಯ ಅವಾಂತರಕ್ಕೆ ನೀರುಪಾಲಾಗಿದೆ. ಹೀಗಾಗಿ ಸರ್ಕಾರ ಪ್ರತಿ ಹೇಕ್ಟರ್ ಗೆ 20 ಸಾವಿರದಂತೆ ಪರಿಹಾರ ನೀಡಬೇಕು ಎಂದು ಹಂಗರಗಾ ಗ್ರಾಮದ ರೈತ ಮುಖಂಡ ಸಂದೀಪ್ ಪಾಟೀಲ್ ಆಗ್ರಹಿಸಿದ್ದಾರೆ.

Intro:ಮಳೆಯಿಂದ ಸೋಯಾಬಿನ್ ಬೆಳೆ ಕಳೆದುಕೊಂಡು ಕಂಗಾಲಾದ ಅನ್ನದಾತ...!

ಬೀದರ್:
ಸಕಾಲಕ್ಕೆ ಮಳೆಯಾಗದ ಮುಂಗಾರು ಹಂಗಾಮಿನ ಉದ್ದು, ಹೆಸರು, ಜೋಳ ಬೆಳೆಗಳು ನಾಶವಾಗಿ ಕಂಗ್ಗೆಟ್ಟು ಹೊದ ರೈತರ ಪಾಲಿನ ಆಶಾಕಿರಣವಾಗಿದ್ದ ಸೋಯಾಬಿನ್ ಬೆಳೆ ಈಗ ಸತತ ಮಳೆಯಿಂದಾಗಿ ನೀರುಪಾಲಾಗಿ ಅನ್ನದಾತ ಅಕ್ಷರಶಃ ಕಂಗಾಲಾಗಿ ಹೊಗಿದ್ದಾನೆ.

ಹೌದು. ಜಿಲ್ಲೆಯ ಔರಾದ್ ತಾಲೂಕಿನ ದಾಬಕಾ, ಹಂಗರಗಾ, ಮುರ್ಕಿ, ಎಕಂಬಾ ಸೇರಿದಂತೆ ಬಹುತೇಕ ಕಡೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈತರು ಬೆಳೆದಿದ್ದ ಸೋಯಾಬಿನ್ ನೀರುಪಾಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂಗಾಗಿ ರೈತ ಸಮುದಾಯ ಕಂಗಾಲಾಗಿ ಹೊಗಿದೆ. ಗದ್ದೆಯಲ್ಲಿ ನೀರು ತುಂಬಿಕೊಂಡು ಸೋಯಾ ಬೆಳೆಯನ್ನು ಹೆಂಗಾದ್ರು ಮಾಡಿ ತೆಗಿಯಬೇಕು ಅಂದ್ರು ಆಗದೆ ಫಲವತ್ತಾಗಿ ಬೆಳೆದ ಸೋಯಾ ರೈತನ ಕಣ್ಣೆದುರಲ್ಲೆ ನೀರುಪಾಲಾಗಿರುವುದು ದುಃಖ ತಂದಿದೆ ಅಂತಾರೆ ಅನ್ನದಾತರು.

ಈ ಬಾರಿ ಮುಂಗಾರು ಹಂಗಾಮಿನ ವೇಳೆಯಲ್ಲಿ ಸಕಾಲಕ್ಕೆ ಮಳೆಯಾಗದೆ ವಾಣಿಜ್ಯ ಬೆಳೆಗಳಾದ ಉದ್ದು, ಹೆಸರು ಹಾಗೆ ಜೋಳ, ತೊಗರಿ ಬಾಡಿ ಹೊಗಿ ನಾಶವಾದ್ರೆ. ಕಡಿಮೆ ಮಳೆಯಾದ್ರು ಬೆಳೆದಿದ್ದ ಸೋಯಾಬಿನ್ ಇನ್ನೆನು ಕಟಾವು ಮಾಡಿ ರಾಶಿ ಮಾಡಬೇಕು ಅನ್ನುವಷ್ಟರಲ್ಲಿ ಮಳೆಯ ಅವಾಂತರಕ್ಕೆ ಎಲ್ಲಾ ಸೋಯಾ ನೀರುಪಾಲಾಗಿದೆ. ಹೀಗಾಗಿ ಸರ್ಕಾರ ಪ್ರತಿ ಹೇಕ್ಟರ್ ಗೆ 20 ಸಾವಿರದಂತೆ ಪರಿಹಾರ ನೀಡಬೇಕು ಎಂದು ಹಂಗರಗಾ ಗ್ರಾಮದ ರೈತ ಮುಖಂಡ ಸಂದೀಪ್ ಪಾಟೀಲ್ ಆಗ್ರಹಿಸಿದ್ದಾರೆ.

ಸೋಯಾ ಬೆಳೆಯಲ್ಲಿ ಈಜಾಡುತ್ತಿರುವ ಅನ್ನದಾತ:

ಇನ್ನೂ ಮಳೆಯಲ್ಲಿ ನೆನೆದು ಬೆಂದಾಗಿರುವ ಸೋಯಾಬಿನ್ ಗದ್ದೆಯಲ್ಲಿ ನೀರು ತುಂಬಕೊಂಡು ಕೆರೆ ಸ್ವರೂಪವಾಗಿರುವುದಕ್ಕೆ ಅಲ್ಪ ಸ್ವಲ್ಪ ಸೋಯಾ ಹೇಗಾದ್ರು ಮಾಡಿ ಹೊರ ತೆಗಿಯಬೇಕು ಎಂದು ಗದ್ದೆಯಲ್ಲಿ ಕೆಲಸ ಮಾಡ್ತಿದ್ದ ರೈತರು ಇನ್ನೆನು ಸೋಯಾ ತೆಗಿಯಬೇಕು ಗದ್ದೆಯಲ್ಲಿ ಹೊರಳಾಡಬೇಕು ಎಂದು ನೀರಿನಲ್ಲಿ ಹೊರಳಾಡಿದ ವಿಡಿಯೊ ಕೂಡ ಸಕತ್ ವೈರಲ್ ಆಗಿದೆ.

ಬೈಟ್-೦೧: ಸಂದೀಪ್ ಪಾಟೀಲ್- ರೈತ ಮುಖಂಡ( ಗದ್ದೆಯಲ್ಲಿ ನಿಂತು ಮರಾಠಿ ಭಾಷೆಯಲ್ಲಿ ಮಾತನಾಡುತ್ತಿರುವವರು)Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.