ಬೀದರ್: ಜಿಲ್ಲೆಯಲ್ಲಿಂದು 63 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,953ಕ್ಕೆ ಏರಿಕೆಯಾಗಿದೆ.
ಇಂದು 43 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 5,346 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 149 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಬೀದರ್, ಭಾಲ್ಕಿ, ಹುಮನಬಾದ್, ಬಸವಕಲ್ಯಾಣ, ಹಾಗೂ ಔರಾದ್ ತಾಲೂಕಿನ ಒಟ್ಟು 63 ಜನರಿಗೆ ಸೋಂಕು ದೃಢಪಟ್ಟಿದೆ.