ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ ಮೂರು ಹೊಸ ಪ್ರಕರಣ ಪತ್ತೆಯಾಗಿದ್ದು, ಕೋವಿಡ್-19 ವೈರಾಣು ಸೋಂಕಿತರ ಸಂಖ್ಯೆ ಅರ್ಧ ಶತಕದ ಗಡಿ ದಾಟಿದೆ.
ನಗರದ ಓಲ್ಡ್ ಸಿಟಿಯ ಕಂಟೇನ್ಮೆಂಟ್ ಝೋನ್ನಲ್ಲಿ ಜಿಲ್ಲಾಡಳಿತ ನಡೆಸಿದ ಸಾಮೂಹಿಕ ವೈದ್ಯಕೀಯ ತಪಾಸಣೆ ನಂತರ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಂದು ಪೆಷೆಂಟ್ ನಂಬರ್ 936 ಹಾಗೂ 937 ಸೋಂಕಿತರ ಸಂಪರ್ಕಕ್ಕೆ ಬಂದ 14 ವರ್ಷದ ಬಾಲಕಿ ಹಾಗೂ 40 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಹೊಸದಾಗಿ 24 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಇದು ಸಾಮೂಹಿಕ ವೈದ್ಯಕೀಯ ತಪಾಸಣೆಯಲ್ಲಿ ಹೊಸದಾಗಿ ಪತ್ತೆಯಾದ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಸೋಂಕಿತರೆಲ್ಲರೂ ಬೀದರ್ ನಗರದ ಓಲ್ಡ್ ಸಿಟಿ ನಿವಾಸಿಗರಾಗಿದ್ದಾರೆ ಎನ್ನಲಾಗಿದೆ.
ಈ ಮೂಲಕ ಬೀದರ್ ಜಿಲ್ಲೆಯ ಸೋಂಕಿತರ ಸಂಖ್ಯೆ 51 ಕ್ಕೇರಿದ್ದು ಈ ಪೈಕಿ 14 ಜನರು ಗುಣಮುಖರಾಗಿದ್ದು, ಒಬ್ಬ ವ್ಯಕ್ತಿಯ ಸಾವಾಗಿದೆ. 36 ಜನರಿಗೆ ಜಿಲ್ಲಾ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.