ಬೀದರ್ : ಕೊರೊನಾ ವೈರಸ್ ಅಟ್ಟಹಾಸ ಜಿಲ್ಲೆಯಲ್ಲಿ ಮುಂದುವರೆದ ಪರಿಣಾಮ ಇಂದು ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಜತೆಗೆ 13 ಜನರಿಗೆ ಸೋಂಕು ತಗುಲಿದೆ.
ತಾಲೂಕಿನ ಮಾಳೆಗಾಂವ್ ಗ್ರಾಮದ 46 ವಯಸ್ಸಿನ ವ್ಯಕ್ತಿ ಜೂನ್ 17ರಂದು ಚಿಕಿತ್ಸೆಗಾಗಿ ಬ್ರೀಮ್ಸ್ ಆಸ್ಪತ್ರೆಗೆ ಸೇರಿದ್ದರು. ಇವರಿಗೆ ಸೋಂಕು ತಗುಲಿದ್ದರ ಪರಿಣಾಮ ಜೂನ್ 18ರಂದು ಸಾವನ್ನಪ್ಪಿದ್ದಾರೆ. ಅಲ್ಲದೇ ನಗರದ ಓಲ್ಡ್ ಸಿಟಿಯ ಗವಾನ್ ಚೌಕ್‌ನ 70 ವರ್ಷದ ವೃದ್ಧರು ಜ್ವರ, ರಕ್ತದೊತ್ತಡದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಜೂನ್ 18 ರಂದು ಸಾವನ್ನಪ್ಪಿದ್ದು, ಅವರ ಗಂಟಲು ದ್ರವದ ಪರೀಕ್ಷಾ ವರದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಕಮಲನಗರ, ಬಸವನಗರ, ಓಲ್ಡ್ ಸಿಟಿ ಮುಲ್ತಾನಿ ಕಾಲೋನಿ, ಶಿವನಗರ, ಜನವಾಡ ಗ್ರಾಮದ ಕೊರೆರಗಲ್ಲಿ, ತಾಲೂಕಿನ ಸುಲ್ತಾನಪೂರ್, ಭಾಲ್ಕಿ ತಾಲೂಕಿನ ನಾಗರಾಳದಲ್ಲಿ ತಲಾ ಒಂದೊಂದು ಕೊರೊನಾ ಕೇಸ್ ಪತ್ತೆಯಾಗಿದೆ. ಆರೋಗ್ಯ ಆಸ್ಪತ್ರೆಯಲ್ಲಿ 4 ಕೇಸ್ ಪಾಸಿಟಿವ್ ವರದಿಯಾಗಿವೆ.
ಜಿಲ್ಲೆಯಲ್ಲಿ ಸೋಂಕಿಗೆ ಬಳಲಿ ಸಾವಿಗೀಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 497 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಇಂದು 58 ಜನರು ಕೊರೊನಾ ವಾರ್ಡ್‌ನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.