ಬಸವಕಲ್ಯಾಣ: ತಾಲೂಕಿನ ಕಲಖೋರಾ ತಾಂಡಾದಲ್ಲಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮನೆಗೆ ಮರಳಿದ ಓರ್ವ ವ್ಯಕ್ತಿಗೆ ಸೋಂಕು ತಗುಲಿರುವುದು ಧೃಡಪ್ಪಟ್ಟಿದೆ.
ಮಹಾರಾಷ್ಟ್ರದ ಮುಂಬೈನಿಂದ ತಾಂಡಾಕ್ಕೆ ಮರಳಿದ 45 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಮಹಾರಾಷ್ಟ್ರದಿಂದ ಬಂದ ಕಾರಣ ಈತನನ್ನು ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿತ್ತು, ಕಳೆದ 28ರಂದು ಕ್ವಾರಂಟೈನ್ ಅವಧಿ ಮುಗಿದ ಕಾರಣ ಕೇಂದ್ರದಿಂದ ಈತನನ್ನು ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿತ್ತು.
![Basavakalyana corona news](https://etvbharatimages.akamaized.net/etvbharat/prod-images/08:07_kn-bdr-6-2-one-new-corona-positive-case-confirmed-kac10003_06062020200103_0606f_1591453863_450.jpeg)
ಮನೆಗೆ ಮರಳಿದ ಕೆಲ ದಿನಗಳ ನಂತರ ಸೋಂಕು ಧೃಡಪಟ್ಟಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸೋಂಕಿತನಿಗೆ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕುಟುಂಬದ ಸದಸ್ಯರನ್ನು ಸಹ ಕ್ವಾರಂಟೈನ್‌ಗೆ ಕಳಿಸಲಾಗಿದೆ.
ತಾಲೂಕಿನಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 71ಕ್ಕೆ ತಲುಪಿದ್ದು, ಇವರ ಪೈಕಿ ಕೆಲವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದವರನ್ನು ಕ್ವಾರಂಟೈನ್ನಲ್ಲಿರಿಸಿ, ತಪಾಸಣೆಗಾಗಿ ಗಂಟಲು ದ್ರವ ಮಾದರಿಯನ್ನು ಕಳಿಸಲಾಗಿದೆ. ಇನ್ನೂ 1 ಸಾವಿರ ಜನರ ವರದಿ ಬರುವುದು ಬಾಕಿ ಇದೆ. 800 ಜನರನ್ನು ತಪಾಸಣೆಗೆ ಒಳಪಡಿಸಬೇಕಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.