ETV Bharat / state

ಶಾಸಕ ಬಿ.ನಾರಾಯಣರಾವ್​ಗೆ ಕೊರೊನಾ ದೃಢ: ಆತಂಕ ಬೇಡ ಎಂದ ಶಾಸಕರು

author img

By

Published : Sep 1, 2020, 9:37 PM IST

ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣರಾವ್​ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

MLA B. Narayanrao
ಶಾಸಕ ಬಿ.ನಾರಾಯಣರಾವ್​

ಬಸವಕಲ್ಯಾಣ: ಕ್ಷೇತ್ರದ ಶಾಸಕ ಬಿ.ನಾರಾಯಣರಾವ್​ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಶೀತ ಹಾಗೂ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗಿದ್ದ ಶಾಸಕರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಒಂದೆರಡು ವಾರಗಳಿಂದ ಸಾರ್ವಜನಿಕ ಸಭೆ, ಸಮಾರಂಭಗಳಿಂದ ಅಂತರ ಕಾಪಾಡಿದ ನಾರಾಯಣರಾವ್​, ಕಳೆದ ಆಗಸ್ಟ್​ 28 ರಂದು ತಾ.ಪಂ ನಲ್ಲಿ ನಡೆದ ಸಭೆ ಹಾಗೂ ಅವತ್ತೆ ತಾಲೂಕಿನ ಖೇರ್ಡಾ ಗ್ರಾಮದ ಮುಲ್ಲಾಮರಿ ಜಲಾಶಯದ ಬಳಿ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಅವರಿಂದ ನಡೆದ ಬಾಗಿನ ಸಮಪರ್ಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದರು.

ತಮಗೆ ಕೊರೊನಾ ಸೋಂಕು ತಗುಲಿರುವ ಕಾರಣ ಕ್ಷೇತ್ರದ ಜನ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಆರೋಗ್ಯವಾಗಿ ಇದ್ದೇನೆ ಎಂದು ಶಾಸಕ ಬಿ.ನಾರಾಯಣರಾವ್​ ಜನರಲ್ಲಿ ಮನವಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಇದ್ದರೂ ಕ್ಷೇತ್ರದ ಕೊರೊನಾ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇರಿಸಿದ್ದೇನೆ ಎಂದಿದ್ದಾರೆ.

ಇನ್ನು ಕ್ಷೇತ್ರದ ಜನರ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಆಪ್ತ ಸಹಾಯಕರಿಗೆ ಸೂಚಿಸಿದ್ದೇನೆ. ಕ್ಷೇತ್ರದ ಜನ ತುರ್ತು ಕೆಲಸ ಕಾರ್ಯಗಳಿದ್ದಲ್ಲಿ ತಮ್ಮ ಆಪ್ತ ಸಹಾಯಕರಾದ ಪಂಕಜ್ ಸೂರ್ಯವಂಶಿ ಹಾಗೂ ಮೊಯಿಜ್ ಖಾನ್ ಬೆಂಗಳೂರು ಅವರನ್ನು ಸಂಪರ್ಕಿಸಬಹುದು ಎಂದು ಶಾಸಕ ಬಿ.ನಾರಾಯಣರಾವ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.