ಬಸವಕಲ್ಯಾಣ: ಕೊರೊನಾ ಹರಡದಂತೆ ತಡೆಗಟ್ಟಲು ತಾಲೂಕಿನಲ್ಲಿ ಸಾಕಷ್ಟು ಮುಂಜಾಗೃತ ಕ್ರಮಕೈಗೊಳ್ಳಲಾಗುತಿದ್ದು, ಸ್ಥಳೀಯ ಸಂಸ್ಥೆಗಳು ಕೂಡ ಕೈಜೋಡಿಸಿವೆ.
ತಾಲೂಕಿನ ತೊಗಲೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಮುಂಜಾಗೃತ ಕ್ರಮವಾಗಿ ಗ್ರಾಮದ ಮುಖ್ಯರಸ್ತೆಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.
ಈ ವೇಳೆ ಗ್ರಾಪಂ ಅಧ್ಯಕ್ಷ, ಪಿಡಿಓ ಹಾಗೂ ಸಿಬ್ಬಂದಿ ತಂಡದಿಂದ ಕೊರೊನಾ ಮುಂಜಾಗೃತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು.