ETV Bharat / state

ಹೃದಯಾಘಾತದಿಂದ ಬೀದರ್ ಮೂಲದ ಬಿಎಸ್ಎಫ್ ಯೋಧ ಸಾವು - ಬೀದರ್

ಬೀದರ್ ಮೂಲದ ಬಿಎಸ್ಎಫ್ ಯೋಧ ಮಾಧವ ಜಟಿಂಗರಾವ್ ಕಾಲೇಕರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

BSF Soldier dies of heart attack
ಮಾಧವ ಜಟಿಂಗರಾವ್ ಕಾಲೇಕರ್ ಮೃತ ಯೋಧ
author img

By

Published : Aug 8, 2022, 11:49 AM IST

Updated : Aug 8, 2022, 12:06 PM IST

ಬೀದರ್​​: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀದರ್ ಮೂಲದ ಬಿಎಸ್ಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಮಲನಗರ ತಾಲೂಕಿನ ಮುರ್ಗ (ಕೆ) ಗ್ರಾಮದ ಮಾಧವ ಜಟಿಂಗರಾವ್ ಕಾಲೇಕರ್ (58) ಮೃತ ಯೋಧ.

ಕಳೆದ 24 ವರ್ಷಗಳಿಂದ‌ ಬಿಎಸ್​​​ಎಫ್ ಕಾನ್ಸ್​​ಟೇಬಲ್ ಆಗಿದ್ದ ಮಾಧವ ಅವರು ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಬಳಿಕ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಪಶ್ಚಿಮ ಬಂಗಾಳಕ್ಕೆ ವರ್ಗಾವಣೆಯಾಗಿತ್ತು. ಸೇವೆಗೆ ಹಾಜರಾಗಲು ತೆರಳಿದ್ದ ಅವರು ರೈಲ್ವೆ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.

ಮೃತ ಮಾಧವ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಿಎಸ್ಎಫ್ ಹಿರಿಯ ಅಧಿಕಾರಿಗಳು ಸಾವಿನ ಬಗ್ಗೆ ಕುಟುಂಬಸ್ಥರಿಗೆ ಖಚಿತಪಡಿಸಿದ್ದಾರೆ. ಇಂದು ಮಧ್ಯಾಹ್ನ ಮುರ್ಗ(ಕೆ) ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಹೋಗುವಾಗ ಲಗೇಜು ಆಟೋಗೆ ವಿದ್ಯುತ್ ತಗುಲಿ ಚಾಲಕ ಸಾವು

Last Updated : Aug 8, 2022, 12:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.