ಬೀದರ್: ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಹಾಕಲಾದ ಲಾಕ್ ಡೌನ್ಗೆ ಜಿಲ್ಲೆಯಲ್ಲಿ ಜನರು ನಿರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಸಂಪೂರ್ಣ ಸ್ತಬ್ದವಾಗಿದ್ದ ನಗರದಲ್ಲಿ ಇಂದು ಜನರು ಎಂದಿನಂತೆ ರಸ್ತೆಗಿಳಿದಿದ್ದು ಕಂಡು ಬಂತು.
ನಗರದ ಗಾಂಧಿ ಗಂಜ್ ಸೇರಿದಂತೆ ಭಾಲ್ಕಿ, ಔರಾದ್ ಹಾಗೂ ಹುಮನಾಬಾದ್ ಪಟ್ಟಣದಲ್ಲಿ ಜನರು ಬೈಕ್ ಗಳು ಕಾರುಗಳೊಂದಿಗೆ ಸಾಮೂಹಿಕವಾಗಿ ರಸ್ತೆಗೆ ಇಳಿದು ಸಾಮಾಜಿಕ ಅಂತರ ಕಾಪಾಡದೇ ಬೇಕಾ ಬಿಟ್ಟಿಯಾಗಿ ತಿರುಗುತ್ತಿದ್ದುದು ಕಂಡು ಬಂದಿದೆ.
ಅಲ್ಲದೇ, ಇದೆಲ್ಲದಕ್ಕೂ ಪೊಲೀಸರು, ಅಧಿಕಾರಿಗಳು ಬೀಗಿ ಬಂದೊಬಸ್ತ್ನ್ನೇ ಸಡಿಲಿಕೆ ಮಾಡಿರುವುದರಿಂದ ಜನರು ಈ ಪರಿಯಲ್ಲಿ ಬೀದಿಗೆ ಬಂದು ಅವಾಂತರ ನಿರ್ಮಾಣವಾಗಲು ಕಾರಣ ಎಂದು ಕೆಲವರು ಆರೋಪಿಸಿದರು.
ನಗರದಲ್ಲಿ ಜಮಾತ್ ಗೆ ಹೋಗಿ ಬಂದ 10 ಜನರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜನರು ಹೊರಗೆ ಬರುವುದು ಬಿಡ್ತಾರೆ ಎನ್ನಲಾಗಿತ್ತು. ಆದರೆ, ಕೊರೊನಾ ರೋಗ ಭೀತಿಯನ್ನೇ ಮರೆತು ಹೀಗೆ ಸಾಮೂಹಿಕವಾಗಿ ಸಾಮಾಜಿಕ ಅಂತರದ ಧೂಳಿಪಟ ಮಾಡಿರುವ ಅಪಾಯಕಾರಿ ಬೆಳವಣಿಗೆ ಕಂಡು ಬಂದಿದೆ.