ಬೀದರ್: ಆಪರೇಶನ್ ಕಮಲದ ಮೂಲಕ ಇಬ್ಬರು ಕಾಂಗ್ರೆಸ್ ತಾಲೂಕು ಪಂಚಾಯಿತಿ ಸದಸ್ಯರನ್ನು ಪಕ್ಷಕ್ಕೆ ಸೆರ್ಪಡೆ ಮಾಡಿಕೊಳ್ಳುವ ಮೂಲಕ ನೂತನ ಕಮಲನಗರ ತಾಲೂಕು ಪಂಚಾಯತ್ನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಅಧ್ಯಕ್ಷರಾಗಿ ಗಿರೀಶ ವಡಿಯಾರ್ ಉಪಾಧ್ಯಕ್ಷರಾಗಿ ಕಾಂಗ್ರೆಸ್ನಿಂದ ಚುನಾಯಿತ ಬಿಜೆಪಿ ಸೆರ್ಪಡೆಯಾದ ಕಸ್ತೂರಿಬಾಯಿ ಬಿರಾದರ ಆಯ್ಕೆಯಾಗಿದ್ದಾರೆ. ಔರಾದ್ ತಾಲೂಕು ಪಂಚಾಯಿತಿ ವಿಭಜನೆ ನಂತರ ಹೊಸದಾಗಿ ರಚನೆಯಾದ ಕಮಲನಗರ ತಾಲೂಕು ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರಾದ ಸೋಮನಾಥ ಖಡಕೆ ಹಾಗೂ ಕಸ್ತೂರಿಬಾಯಿ ಬಿರಾದರ ಬಿಜೆಪಿ ಸೆರ್ಪಡೆಯಾಗುವ ಮೂಲಕ ಕಾಂಗ್ರೆಸ್ಗೆ ಬಿಗ್ ಶಾಕ್ ನೀಡಿದ್ದಾರೆ.