ಬೀದರ್ : ರಷ್ಯಾ - ಉಕ್ರೇನ್ ಮಧ್ಯೆ ಸಂಘರ್ಷ ಮುಂದುವರೆದಿದೆ. ಇದರ ಮಧ್ಯೆ ಎರಡು ದೇಶಗಳಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅದೇ ರೀತಿ ಗಡಿ ಜಿಲ್ಲೆ ಬೀದರ್ನ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಇರುವ ಸ್ಥಳದಲ್ಲಿ ಬಾಂಬ್ ಬ್ಲಾಸ್ಟ್, ಫೈರಿಂಗ್ ನಡೆದಿದೆ ಎಂದು ತಿಳಿದುಬಂದಿದೆ.
ಬಸವಕಲ್ಯಾಣ ನಿವಾಸಿ ವೈಷ್ಣವಿ ಹಾಗೂ ಬೀದರ್ನ ಅಮಿತ್ ಅವರು ಉಕ್ರೇನ್ನಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿ ಸಿಲುಕಿಕೊಂಡಿದ್ದಾರೆ. ಕಾಕ್ಯೂ೯ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಅಧ್ಯಯನ ಮಾಡುತ್ತಿರುವ ವೈಷ್ಣವಿ ಅವರು ಘಟನೆ ಬಗ್ಗೆ ಮಾತನಾಡಿದ್ದು, ತಾವು ವಾಸವಿರುವ ಹಾಸ್ಟೆಲ್ ಪಕ್ಕದಲ್ಲೇ ಇಡೀ ದಿನ ರಾತ್ರಿ ಫೈರಿಂಗ್ ನಡೆದಿದೆ ಎಂದು ತಿಳಿಸಿದ್ದಾರೆ.
ದಿನವಿಡೀ ಫೈರಿಂಗ್ ನಡೆಯುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಜೀವ ರಕ್ಷಣೆಗಾಗಿ ಬಂಕರ್ನಲ್ಲಿ ಅಡಗಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಓದಿ: ಹುಬ್ಬಳ್ಳಿಯಲ್ಲಿ ಬೆಂಕಿ ಹಚ್ಚಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ