ETV Bharat / state

ಕಾರ್ಯಕರ್ತನಿಂದ-ಕೇಂದ್ರ ಸಚಿವನಾಗಿ ಭಗವಂತ ಖೂಬಾ ನಡೆದು ಬಂದ ದಾರಿ

ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಲಬುರಗಿ ಮೂಲಕ ಶರಣು ಸಲಗರ ಅವರನ್ನು ಸ್ಪರ್ಧೆಗೆ ಇಳಿಸಿ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಹೈಕಮಾಂಡ್ ಗಮನ ಸೆಳೆದಿದ್ದರು.  2019ರ ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಗೆಲುವು ಸಾಧಿಸಿದ ಭಗವಂತ ಖೂಬಾ ಅವರು, ಈಗ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ..

Bidar mp bhagwant khuba
ಬೀದರ್‌ ಸಂಸದ ಭಗವಂತ ಖೂಬಾ
author img

By

Published : Jul 7, 2021, 5:53 PM IST

ಬೀದರ್ : ಸಾಮಾನ್ಯ ಕಾರ್ಯಕರ್ತನಾಗಿದ್ದ ಭಗವಂತ ಖೂಬಾ ಅವರು ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಇಂದು ಕೇಂದ್ರ ಸಚಿವ ಸ್ಥಾನದವರೆಗಿನ ಪ್ರಯಾಣ ರೋಚಕವಾಗಿದೆ.

ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಜೂನ್ 1, 1967ರಲ್ಲಿ ಮಹಾದೇವಿ ಹಾಗೂ ಗುರುಬಸಪ್ಪ ದಂಪತಿ ಮಗನಾಗಿ ಜನಿಸಿದ ಅವರು, ತುಮಕೂರಿನ ಸಿದ್ದಗಂಗಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಿಂದ ಬಿಇ ಪದವಿ ಪಡೆದರು. 2005ರವರೆಗೆ ರೈಲ್ವೆ ಇಲಾಖೆಯ ವಿವಿಧ ಗುತ್ತಿಗೆಯಲ್ಲಿ ತೊಡಗಿದ್ದ ಇವರು, ಇದೇ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕರಾಗಿದ್ದರು. ಜತೆಗೆ ಭಾರತೀಯ ಜನತಾ ಪಕ್ಷದ ಕಾರ್ಯ ಚಟುವಟಿಯಲ್ಲಿ ಪಾಲ್ಗೊಂಡು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನಿಭಾಯಿಸಿದ್ದರು.

2ನೇ ಬಾರಿ ಸಂಸದರಾಗಿ ಆಯ್ಕೆಯಾದ ಭಗವಂತ ಖೂಬಾ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಾಗೂ ಪತಂಜಲಿ ಸಂಸ್ಥಾಪಕ ರಾಮದೇವ ಬಾಬಾ ಅವರ ಆಶೀರ್ವಾದ ಫಲ ನೀಡಿದೆ ಎನ್ನಲಾಗಿದೆ. 2014ರಲ್ಲಿ ಪತಂಜಲಿ ಸಂಸ್ಥೆಯ ಬಾಬಾ ರಾಮದೇವ ಅವರ ಕೃಪೆಯಿಂದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಕಾಂಗ್ರೆಸ್ ಅಭ್ಯರ್ಥಿ ದಿ.ಧರಂಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿ ಬೀದರ್ ಸಂಸದರಾದರು.

ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಲಬುರಗಿ ಮೂಲಕ ಶರಣು ಸಲಗರ ಅವರನ್ನು ಸ್ಪರ್ಧೆಗೆ ಇಳಿಸಿ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಹೈಕಮಾಂಡ್ ಗಮನ ಸೆಳೆದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಗೆಲುವು ಸಾಧಿಸಿದ ಭಗವಂತ ಖೂಬಾ ಅವರು, ಈಗ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ. ಬೀದರ್ ಜಿಲ್ಲೆಯ ರಾಜಕೀಯದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ಮಹತ್ತರ ಸಾಧನೆಗೈದ ಆಶ್ಚರ್ಯಕರ ಬೆಳವಣಿಗೆಗೆ ಖೂಬಾ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಮೋದಿ ಸಂಪುಟಕ್ಕೆ ಮೇಜರ್​ ಸರ್ಜರಿ: ಸಚಿವ ಸ್ಥಾನಕ್ಕೆ ಡಿವಿಎಸ್​ ರಾಜೀನಾಮೆ.. ಶೋಭಾಗೆ ಮಣೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.